ಉ.ಕ ಸುದ್ದಿಜಾಲ ಅಥಣಿ :

ಅಥಣಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ಅಥಣಿಯ ಸಮಾಜ ಸೇವಕ, ಕಾಂಗ್ರೆಸ್‌ ಮುಖಂಡ ಧರೇಪ್ಪ ಠಕ್ಕಣ್ಣವರ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜನರಲ್ ಸೆಕ್ರೆಟರಿ ವಿನಯ ಕಾರ್ತಿಕ ಅವರಿಗೆ ಅರ್ಜಿ ಸಲ್ಲಿಸಿದರು.

ಈ ವೇಳೆ ಧರೇಪ್ಪ ಠಕ್ಕಣ್ಣವರ ಮಾತನಾಡಿ, ಅಥಣಿ ಕ್ಷೇತ್ರದಲ್ಲಿನ ಸಂಕೋನಟ್ಟಿ ಗ್ರಾಮದ ಬಡಕುಟುಂಬದಲ್ಲಿ ಜನಿಸಿ, ಹಲವಾರು ಸಂಕಷ್ಟದ ಸವಾಲುಗಳ ಎದುರಿಸಿ ಬೆಳೆದು ನೊಂದವರ, ಬಡವರ ಬಾಳಿಗೆ ಸಾಧ್ಯವಾದಷ್ಟು ಸಹಕಾರ ಮಾಡುತ್ತಾ ಕೃಷ್ಣಾ ನದಿಯಿಂದ ನೆರೆಹಾವಳಿ, ಬರಗಾಲ, ಪ್ರಕೃತಿ ವಿಕೋಪ, ಕೊರೊನಾದಂತಹ  ಹಲವಾರು ಸಂದರ್ಭದಲ್ಲಿ ಕ್ಷೇತ್ರದಲ್ಲೆಲ್ಲ ಸಂಚರಿಸಿ ಬಡ ಜನರಿಗೆ ಸಹಾಯ ಮಾಡಿದ್ದೇನೆ.

ಯಾವುದೇ ಅಧಿಕಾರವಿಲ್ಲದಿದ್ದರೂ ಕಾಂಗ್ರೇಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯ ಜತೆಗೆ ಬಡ ಜನರಿಗೆ ಅನ್ಯಾಯವಾದಾಗ ಹೋರಾಟ ನಡೆಸಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ.

ಪಕ್ಷ ನನಗೆ ಅವಕಾಶ ಕೊಡುತ್ತದೆ ಎಂದು ಆತ್ಮವಿಶ್ವಾದಿಂದ ಹಲವಾರು ಹಿರಿಯ ನಾಯಕರ ಭರವಸೆಯ ಮೇರೆಗೆ ಅರ್ಜಿ ಸಲ್ಲಿಸಿದ್ದೇನೆ. ಪಕ್ಷದ ಹೈಕಮಾಂಡ್, ಕೆಪಿಸಿಸಿ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಪಕ್ಷ  ಟಿಕೆಟ್ ನೀಡಿದರೆ ಸಾಮಾಜಿಕ ನ್ಯಾಯದಡಿ ಸಮಗ್ರ ಅಭಿವೃದ್ಧಿಗೆ ಪಕ್ಷ ನಿಷ್ಠೆಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ‌ ಎಂದರು.

ಅಥಣಿಯ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಸದಸ್ಯ ಚಿದಾನಂದ ಮುಕಣಿ, ಕಾಂಗ್ರೆಸ್ ಮುಖಂಡ ನಿಶಾಂತ ದಳವಾಯಿ, ಮತ್ತಿತರರು ಉಪಸ್ಥಿತರಿದ್ದರು.