ಉ.ಕ ಸುದ್ದಿಜಾಲ ಅಥಣಿ :
ವಕೀಲರ ಪುರಸಭೆ ಮುಖ್ಯ ಅಧಿಕಾರಿ ನಡುವೆ ಹೊಡೆದಾಟ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಘಟನೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಗೋಡಿಮನಿ ಹಾಗೂ ವಕೀಲ ಮಿತೇಶ್ ಪಟ್ಟಣ ನಡುವೆ ಹೊಡೆದಾಟ.
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಕಳೆದ ಒಂದು ವರ್ಷದ ಹಿಂದೆ ಸಾಮಾಜಿಕ ಕಾರ್ಯಕರ್ತರಿಂದ ಮನವಿ. ಮನವಿ ನೀಡಿದರು ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿ. ಯಾಕೆ ವಿಳಂಬ ಎಂದು ವಕೀಲರಿಂದ ಪ್ರಶ್ನೆ..
ಪುರಸಭೆ ಮುಖ್ಯಾಧಿಕಾರಿ ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದ್ದು ಮಾತಿನ ಚಕಮಕಿ ಅತಿರೇಖಕ್ಕೆ ಹೋಗಿ ಇಬ್ಬರು ಹೊಡೆದಾಟ. ಹಲ್ಲೆಗೆ ಒಳಗಾಗಿರುವ ಇಬ್ಬರೂ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಬ್ಬರು ಕಡೆಯಿಂದ ಇದುವರೆವಿಗೂ ದೂರು ದಾಖಲಾಗಿಲ್ಲ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.