ಉ.ಕ ಸುದ್ದಿಜಾಲ ಚಿಕ್ಕೋಡಿ :

ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಹಿನ್ನೆಲೆ ಮುತಾಲಿಕ್ ಕಿಡಿ ಕೃತ್ಯ ಮಾಡಿದ ರಾಷ್ಟ್ರ ದ್ರೋಹಿಗಳಿಗೆ ಕಠಿಣ ಕ್ರಮಕ್ಕೆ ಒತ್ತಾಯ ಧಾರವಾಡದಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ.

ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಹಿನ್ನೆಲೆ ಮುತಾಲಿಕ್ ಕಿಡಿ

ಗಾಂಧಿ ಜಯಂತಿ ಮತ್ತು ಲಾಲಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಇಬ್ಬರ ಜಯಂತಿ ಮಾಡಲಾಗುತ್ತೆ ಆದರೆ ಧಾರವಾಡದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಅಪಮಾನ ಮಾಡಲಾಗಿದೆ ಟಿಪ್ಪು ಸುಲ್ತಾನ್ ಧ್ವಜವನ್ನು ಮೇಲೆ ಹಾರಿಸಿ ಕೆಳಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ.

ರಾಷ್ಟ್ರ ದ್ರೋಹದ ಕೆಲಸವನ್ನು ಮಾಡಿದ್ದಾರೆ ಕೂಡಲೇ ರಾಷ್ಟ್ರ ದ್ರೋಹಿಗಳನ್ನು ಬಂಧಿಸಬೇಕು. ದೇಶದ್ರೋಹಿ ಸೆಕ್ಷನ್ ಹಾಕಿ, ಅವರನ್ನ ಒಳಗಡೆ ಹಾಕಬೇಕು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೇ ದೇಶಕ್ಕೆ ಅಪಮಾನ ಮಾಡಿದಂತೆ ಇಂತಹ ದೇಶದ್ರೋಹಿಗಳನ್ನು ಬಚಾವ್ ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡ್ತಿದೆ.

ದೇಶಕ್ಕೆ ಮತ್ತು ದೇಶ ಭಕ್ತರಿಗೆ ಅವಮಾನ ಮಾಡಿದಂತಾಗಿದೆ
ಪೊಲೀಸ್ ಇಲಾಖೆ ಕೂಡಲೇ ಇಂತಹ ನೀಚರನ್ನ ಬಂಧಿಸಬೇಕು ಎಂದು ಆಗ್ರಹಿಸಿದ ಮುತಾಲಿಕ.

ರಾಷ್ಟ್ರ ಧ್ವಜಕ್ಕೆ ಕಿಮ್ಮತ್ತೆ ಇಲ್ವಾ? ಬೂಟಿಗೆ, ನೆಲಕ್ಕೆ ರಾಷ್ಟ್ರ ಧ್ವಜ ತಾಗುತ್ತಿದೆ

ಇಂತಹ ದ್ರೋಹಿಗಳಿಗೆ ಕಠಿಣ ಶಿಕ್ಷೆ ಕೊಡುವಂತದ್ದು ನಮ್ಮ ಕಾನೂನಲ್ಲೂ ಇಲ್ಲ. ಧಾರವಾಡದಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಶೂ ಕಟ್ಟಬೇಕಾದರೆ ಎಡಗೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಬಲಗೈಯಿಂದ ಶೂ ಕಟ್ಟಿದ್ದಾರೆ ಅದನ್ನು ನೋಡಿದರೆ ಇವರ ದೇಶಭಕ್ತಿ ಗೊತ್ತಾಗುತ್ತೆ ಅಂದ್ರೆ ಆ ಧ್ವಜಕ್ಕೆ ಕಿಮ್ಮತ್ತೆ ಇಲ್ವಾ?

ಬೂಟಿಗೆ ಹಾಗೂ ನೆಲಕ್ಕೆ ರಾಷ್ಟ್ರದ ತಾಗುತ್ತಿದೆ, ಅದು ಅವಮಾನ ಅಲ್ವಾ? ಅಲ್ಲಿ ಯಾರೂ ಕೂಡ ಇದನ್ನು ಗಮನಿಸಲಿಲ್ಲ, ಅದನ್ನ ಸರಿ ಕೂಡ ಪಡಿಸಲಿಲ್ಲ ರಾಷ್ಟ್ರ ಭಕ್ತಿ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮರ್ಯಾದೆ ಇಲ್ದೆ ನಡ್ಕೊಂಡಂತಹ ಕೆಟ್ಟ ದ್ರೋಹಿಗಳಿಗೆ ಕಠಿಣ ಶಿಕ್ಷೆ ಕೊಡುವಂತದ್ದು ನಮ್ಮ ಕಾನೂನಲ್ಲೂ ಇಲ್ಲ.

ರಾಷ್ಟ್ರ ದ್ರೋಹಿಗಳು ಜೈಲಿಗೆ ಹೋದರೂ ಜಾಮೀನು ಮೇಲೆ ಹೊರಗೆ ಬರ್ತಾರೆ ಕೋರ್ಟ್ ಸೆಕ್ಷನ್ಗಳು ಸರಿಯಾಗಿ ಪಾಠ ಕಲಿಸುವಂತಹ ಸೆಕ್ಷನ್ಗಳಾಗಿ ಇಲ್ಲ ಕೋರ್ಟ್, ಜನಪ್ರತಿನಿಧಿಗಳು, ಪೊಲೀಸರು ಇಂತವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು
ಸಿಎಂ ಸಿದ್ದರಾಮಯ್ಯರ ಶೂ ಕಟ್ಟಿದಂತ ವ್ಯಕ್ತಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ ಮುತಾಲಿಕ್.