ಉ.ಕ ಸುದ್ದಿಜಾಲ ಹುಕ್ಕೇರಿ :

ಸತೀಶ್ ಜಾರಕಿಹೊಳಿ ಹಿಂದೂ ಶಬ್ಧದ ಅರ್ಥದ ಕುರಿತ ಹೇಳಿಕೆ ‌ವಿಚಾರವಾಗಿ ನಾಳೆ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ನಾಳೆ ಬುಧವಾರ ನಾನೂ ಹಿಂದು ಎಂಬ ಹೆಸರಿನಡಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ.

ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಯಮಕನಮರಡಿ ಕೆಪಿಸಿಸಿ ‌ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿನಿಧಿಸೋ ಕ್ಷೇತ್ರ, ಇತ್ತಿಚಿಗಷ್ಟೆ ಹಿಂದೂ ಎಂಬ ಶಬ್ಧದ ಅರ್ಥದ ಕುರಿತು ಚರ್ಚೆ ಆಗಬೇಕು ಎಂದು ಹೇಳಿಕೆ ನೀಡಿದ್ದ ಸತೀಶ ಜಾರಕಿಹೊಳಿ.

ಸತೀಶ್‌ಗೆ ಸೆಡ್ಡು ಹೊಡೆಯಲು ಮುಂದಾದ ಹಿಂದೂಪರ ಸಂಘಟನೆಗಳು,? ಯಮಕನಮರಡಿಯ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಸಮಾವೇಶ ನಡೆಯಲಿದ್ದು, ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿರುವ ಚಕ್ರವರ್ತಿ ಸೂಲಿಬೆಲೆ.