ಉ.ಕ ಸುದ್ದಿಜಾಲ ಹುಕ್ಕೇರಿ :

ಸಾಲಭಾದೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ರೈತನೋರ್ವ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.

ಬೆಳವಿ ಗ್ರಾಮದ ರೇಷ್ಮೆ ಬೆಳೆಗಾರ ಭೀಮಗೌಡ ಶಿವಲಿಂಗ ಮಗದುಮ್ಮ (41) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ಭೀಮಗೌಡ ವಿವಿಧ ಕಡೆ ಬೆಳೆಸಾಲ, ಕೈಸಾಲ ಮಾಡಿದ್ದ ಒಂದೆರಡು ಬೆಳೆಗಳು ಮಾಡಿದ ವೆಚ್ಚದ ಆದಾಯ ಬಂದಿರಲಿಲ್ಲ.

ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿದ್ದಾನೆ. ಈ‌ ಕುರಿತು ಹುಕ್ಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.