ಉ.ಕ ಸುದ್ದಿಜಾಲ ಚಿಕ್ಕೋಡಿ :

ರುದ್ರಭೂಮಿಗೆ ಹೋಗಲು ದಾರಿವಿಲ್ಲವೆಂದು ರಸ್ತೆ ಮದ್ಯೆಯೇ ಶವವಿಟ್ಟು ಧರಣಿ ನಡೆಸಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದ ಯಕ್ಸಂಬಾ- ಚಿಕ್ಕೋಡಿ ರಸ್ತೆಯನ್ನು ಮದ್ಯೆ ಶವವಿಟ್ಟು ಭಜನೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಲಾಯಿತು.

ಇಂದು ಬೆಳಗ್ಗೆ ಅನಾರೋಗ್ಯದಿಂದ ನಣದಿವಾಡಿ ಗ್ರಾಮದ ಸುಧಾಕರ್ ಮಹಾದೇವ್ ನಾಯಕದ ಎಂಬುವವರು ಮೃತಪಟ್ಟಿದ್ದು, ರುದ್ರಭೂಮಿಗೆ ಹೋಗುವ ದಾರಿ ವಿಚಾರಕ್ಕೆ ಸಂಬಂಧಸಿದಂತೆ ತಕರಾರು ನಣದಿವಾಡಿ ಗ್ರಾಮದ ಯಕ್ಸಂಬಿ ಕುಟುಂಬ ತಕರಾರು ತಗೆದಿತ್ತು.

ಅಷ್ಟೇ ಅಲ್ಲದೇ ರುದ್ರಭೂಮಿಗೆ ತೆರಳುವ ದಾರಿಗೆ ಬೇಲಿ ಹಾಕಿ ದಾರಿ ಬಂದ್ ಮಾಡಿರುವ ಯಕ್ಸಂಬಿ ಕುಟುಂಬ ವಿರುದ್ದ ಸ್ಥಳೀಯರು ಹಾಗೂ ಮೃತ ಮನೆಯವರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ದಾರಿ ಮಾಡಿಕೊಡಬೇಕು ಎಂದು ರಸ್ತೆ ತಡೆಹಿಡಿದು ಪ್ರತಿಭಟನೆ ನಡೆಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಸದಲಗಾ ಪೊಲೀಸರು ಪರಿಸ್ಥಿತಿಯನ್ನು ಹತೋಟೆಗೆ ತರಲು ಪ್ರಯತ್ನಿಸಿದರು ಹಾಗೂ ಪ್ರತಿಭಟನಾಕಾರರ ಮನವೊಲಿಸಿದರು.

ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.