ಉ.ಕ ಸುದ್ದಿಜಾಲ ಅಥಣಿ :
ಅಥಣಿಯಲ್ಲಿ ಕೊರೊಣಾ ಆರ್ಭಟ, ಒಂದೇ ಕಾಲೇಜಿನಲ್ಲಿ 62 ವಿದ್ಯಾರ್ಥಿಗಳ ರಿಪೋರ್ಟ್ ಪಾಸಿಟಿವ್, ಅಥಣಿಯ ಬನಜವಾಡ ಕಾಲೇಜಿನಲ್ಲಿ ಕೊರೊನಾ. ಈಗಾಗಲೇ ಸಂಪೂರ್ಣ ಕಾಲೇಜ್ ಒಂದು ವಾರದವರೆಗೆ ಸೀಲ್ ಡೌನ್ ಮಾಡಲಾಗಿದೆ.
200 ವಿದ್ಯಾರ್ಥಿಗಳಿಗೆ ಸ್ಯಾಂಪಲ್ ತಪಾಸಣೆಗಾಗಿ ತೆಗೆಯಲಾಗಿತ್ತು ಎರಡು ದಿನಗಳ ಹಿಂದೆ ಕಾಲೇಜಿನ 3 ವಿದ್ಯಾರ್ಥಿಗಳಲ್ಲಿ ಲಕ್ಷಣಗಳು ಕಾಣಿಸಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳ ಸ್ಯಾಂಪಲ್ ಪಡೆಯಲಾಗಿತ್ತು. ಈಗ ಸಧ್ಯ 69 ವಿದ್ಯಾರ್ಥಿಗಳಲ್ಲಿ ಸೊಂಕು ಪತ್ತೆಯಾಗಿದೆ. ಅದರಲ್ಲಿ 18 ವಿದ್ಯಾರ್ಥಿಗಳು ಅಥಣಿ ಸ್ಥಳೀಯರಾಗಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಅಥಣಿ ತಾಲೂಕಿನ ಬೇರೆ ಬೇರೆ ಊರಿನವರಾಗಿದ್ದಾರೆ. ಎಲ್ಲರನ್ನೂ ಪತ್ತೆ ಹಚ್ಚುವ ಕಾರ್ಯ ಆರೋಗ್ಯ ಇಲಾಖೆ ಮಾಡುತ್ತಿದೆ.
ಎಲ್ಲ ವಿದ್ಯಾರ್ಥಿಗಳನ್ನು ಹೊಮ್ ಐಸೋಲೇಷನ್ ನಿಲ್ಲಿಸಲಾಗುವುದು. ಯಾರೂ ಭಯ ಆತಂಕಪಡುವ ಅಗತ್ಯವಿಲ್ಲ. ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ತಪಾಸಣೆ ಕಾರ್ಯ ಮಾಡುತ್ತೇವೆ. ತಾಲೂಕಿನಾದ್ಯಂತ ಯಂಕಂಚಿ, ಉಗಾರ ಸೇರಿದಂತೆ ಅಥಣಿಯಲ್ಲಿ. ಕೊವೀಡ್ ಪ್ರಕರಣಗಳು ಪತ್ತೆಯಾಗಿವೆ. ಮೂರನೇ ಅಲೆಯ ಪರಿಣಾಮ ಮಕ್ಕಳ ಮೇಲೆ ಬೀರುವ ಸಾಧ್ಯತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಥಣಿ ಕಾಗವಾಡ ತಾಲೂಕುಗಳಲ್ಲಿ ಹೆಚ್ಚಿನ ತಪಾಸಣೆ ಕಾರ್ಯ ನಡೆಯುತ್ತಿದೆ.
ನಿನ್ನೆ ಅಷ್ಟೇ ಅಥಣಿ ತಾಲೂಕಿನ ಯಕಂಚ್ಚಿ ಪ್ರೌಢಶಾಲೆಯಲ್ಲಿ 10 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು ಇಂದು ಮತ್ತೆ ಬನಜವಾಡ್ ರೆಸಿಡೆನ್ಸಿಯಲ್ ಕಾಲೇಜಿನ 62 ವಿದ್ಯಾರ್ಥಿಗಳಿಗೆ ಕೊರೊಣಾ ಧೃಡಪಟ್ಟಿದೆ.