ಉ.ಕ ಸುದ್ದಿಜಾಲ ರಾಯಬಾಗ
ಟ್ರಾಕ್ಟರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನ ಥಳಿಸಿದ ಗ್ರಾಮಸ್ಥರು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸವದತ್ತಿ ಗ್ರಾಮದಲ್ಲಿ ನಡೆದ ಘಟನೆ.
ಬಾವನ ಸವದತ್ತಿ ಗ್ರಾಮದ ಅಶೋಕ್ ಗೋಕಾವಿ 35 ಹಾಗೂ ಸುಧಾಕರ್ ಚಂಪೂ 32 ಸಿಕ್ಕಿಬಿದ್ದ ಕಳ್ಳರು. ರವಿವಾರ ಬೆಳಗಿನ ಜಾನ ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಖದಿಮರು. ಕಳೆದ ಹಲವು ದಿನಗಳಿಂದ ನಿರಂತರ ಕಳ್ಳತನ ಮಾಡುತ್ತಲೇ ಇದ್ದರು.
ಇಂದು ಬೆಳಗಿನ ಜಾವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಖದಿಮರು. ಗ್ರಾಮದ ಮಧ್ಯೆ ಕಂಬಕ್ಕೆ ಕಟ್ಟಿಹಾಕಿ ಗ್ರಾಮಸ್ಥರಿಂದ ಧರ್ಮದೇಟು. ಬಳಿಕ ರಾಯಬಾಗ ಪೊಲೀಸರಿಗೆ ಕಳ್ಳರನ್ನ ಒಪ್ಪಿಸಿದ ಗ್ರಾಮಸ್ಥರು.