ಉ.ಕ ಸುದ್ದಿಜಾಲ ಅಥಣಿ :

ಬೀದಿ ನಾಯಿ ಕಚ್ಚಿದ ಪರಿಣಾಮ ನಾಲ್ಕು ವರ್ಷದ ಕಂದಮ್ಮ ದಾರುಣವಾಗಿ ಮೃತ ಪಟ್ಟ ಹೃದಯ ಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ನಡೆದಿದೆ.

ಸೌಜನ್ಯ ಮಲ್ಲಪ್ಪ ಮುತ್ತೂರ ಎಂಬ ನಾಲ್ಕು ವರ್ಷದ ಬಾಲಕಿ ಬೀದಿ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗಮದ್ಯದಲ್ಲೇ ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.