ಉ.ಕ ಸುದ್ದಿಜಾಲ ತುಮಕೂರು :
ಬಸ್ ಪ್ರಯಾಣಿಕರ ಸೋಗಿನಲ್ಲಿ ಪಿಕ್ ಪಾಕೇಟ್ ಮಾಡ್ತಿದ್ದ ಐನಾತಿ ಕಳ್ಳಿಯ ಬಂಧನ. ಸುಮಾರು 10,5 ಲಕ್ಷ ಬೆಲೆ ಬಾಳುವ 134 ಗ್ರಾಂ ಚಿನ್ನದ ಒಡವೆ ವಶಕ್ಕೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರ ಕಾರ್ಯಾಚರಣೆ. ಅಲುವೇಲಮ್ಮ 25 ಕೊರಟಗೆರೆ ಬೋವಿ ಕಾಲೋನಿ ನಿವಾಸಿ. ಕಳೆದ ಜನವರಿ 9 ರಂದು ತಿಪಟೂರು ತಾಲೂಕಿನ ಗೌಡನಹಟ್ಟಿ ಗ್ರಾಮದ ರಾಜೇಶ್ವರಿ ಸಂಬಂಧಿಕರ ಮನೆಗ ಬಸ್ ನಲ್ಲಿ ಹೋಗಿದ್ದಾಗ ಒಡವೆ ಕದ್ದಿದ್ದ ಕಳ್ಳಿ.
ಹುಳಿಯಾರಿನ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಕಳ್ಳಿ. ಆರೋಪಿ ಅಲುವೇಲಮ್ಮ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಡವೆ ಕಳ್ಳತನ ಮಾಡಿದ್ದಳು ಎನ್ನಲಾಗಿದೆ. ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್ ಪ್ರಯಾಣಿಕರ ಸೋಗಿನಲ್ಲಿ ಪಿಕ್ ಪಾಕೇಟ್ ಮಾಡ್ತಿದ್ದ ಐನಾತಿ ಕಳ್ಳಿಯ ಬಂಧನ
