ಉ.ಕ ಸುದ್ದಿಜಾಲ ಬಾಗಲಕೋಟೆ :

ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ ವಿಚಾರ ಮಾತಾಡಿದ ಯತ್ನಾಳ, ರಾಜಕೀಯ ಮಾತಾಡದಂತೆ ಸಾರ್ವಜನಿಕರ ಆಕ್ಷೇಪ. ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ, ಕಾರ್ಯಕ್ರಮದ ಸ್ಟೇಜ್‌ನಿಂದ ಕೆಳಗಿಳಿದ ಯತ್ನಾಳ.

ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ ವಿಚಾರ ಮಾತಾಡಿದ ಯತ್ನಾಳ, ರಾಜಕೀಯ ಮಾತಾಡದಂತೆ ಸಾರ್ವಜನಿಕರ ಆಕ್ಷೇಪ

ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿರುವ ಅಲ್ಲಮಪ್ರಭುವಿ‌ನ ನೂತನ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ನಡೆದ ಘಟನೆ. ಎಂಟು ಎಕರೆ ವಕ್ಫ ಅಂತ ನಮೂದಾಗಿತ್ತು, ಈ ರೀತಿ ಮಾಡ್ಕೊಂತ ಹೊಂಟಾರ ಎನ್ನುತ್ತಲೇ, ರಾಜಕೀಯ ಮಾತಾಡಬೇಡಿ ಎಂದು ಜನರು,

ಇದು ರಾಜಕೀಯನಾ? ಎಂದು ಪ್ರಶ್ನಿಸಿದ ಶಾಸಕ ಯತ್ನಾಳ, ಹೌದು, ರಾಜಕೀಯ ಎಂದ ಜನತೆ, ಆಯ್ತು ಎನ್ನುತ್ತಲೇ ಮೈಕ್ ಬಿಟ್ಟು ಅಲ್ಲಿಂದ ಯತ್ನಾಳ ನಿರ್ಗಮನ‌.

ಸುಮರು ಒಂದು ತಿಂಗಳಿಂದ ನಡೆಯುತ್ತಿರೋ ಅಲ್ಲಮಪ್ರಭು ದೇವಾಲಯದ ಉದ್ಘಾಟನೆ. ಸರ್ವ ಧರ್ಮಿಯರೆಲ್ಲಾ ಸೇರಿ ವಂತಿಗೆ ಮೂಲಕ ನಿರ್ಮಿಸಿರುವ ದೇವಾಲಯ.

6 ಕೋಟಿಗೂ ಅಧಿಕ ರೂ ಕೂಡಿಸಿ, ತಿಂಗಳುಗಟ್ಟಲೇ ಹೋಮ, ಹವನ ನಡೆಸಿ,ಅದ್ಧೂರಿಯಾಗಿ ದೇವಾಲಯ ಉದ್ಘಾಟನೆ ಮಾಡುತ್ತಿರೊ ಭಕ್ತರು.