ಉ.ಕ ಸುದ್ದಿಜಾಲ ಬೆಳಗಾವಿ :
27 ವರ್ಷದ ಯುವಕನ ಮೇಲೆ ಗುಂಡಿನ ದಾಳಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ತಡರಾತ್ರಿ ಘಟನೆ ಹಲಸಿ ಗ್ರಾಮದ ಅಲ್ತಾಫ್ ಮಕಾಂದಾರ್ (27) ಮೃತ ದುರ್ದೈವಿ
ಸ್ಥಳಕ್ಕೆ ಉತ್ತರ ವಲಯ ಐಜಿಪಿ ವಿಕಾಸ ಕುಮಾರ್, ಹೆಚ್ಚುವರಿ ಎಸ್ಪಿ ಶ್ರುತಿ ಭೇಟಿ, ಪರಿಶೀಲನೆ ಗುಂಡಿನ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ನಂದಗಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಗಾವಿಯಲ್ಲಿ ಮಧ್ಯರಾತ್ರಿ ಗುಂಡಿನ ದಾಳಿಗೆ ಯುವಕ ಬಲಿ ಪ್ರಕರಣ
ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಮಾಹಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಹಲಸಿ ಗ್ರಾಮದ ಮಕ್ತುಮ್ ತಹಶಿಲ್ದಾರರ, ಉಸ್ನಾನಸಾಬ್ ತಹಶಿಲ್ದಾರರ, ಮಲೀಕ ಶಾಹಿವಾಲೆ ವಶಕ್ಕೆ ಪಡೆಯಲಾಗಿದೆ.
ಆಲ್ತಾಫ ಸೇರಿ ನಾಲ್ವರು ಕಾಡು ಹಂದಿ ಮತ್ತು ನವಿಲಿನ ಬೇಟೆಗೆ ಕಾಡಿಗೆ ಹೋಗಿದ್ದರು ಗ್ರಾಮದಿಂದ ಎರಡು ಕಿಮೀ ದೂರ ಇರುವ ಹಲಸಿ ಬೇಕವಾಡ ರಸ್ತೆಯ ನರಸವಾಡಿ ಸೇತುವೆ ಬಳಿ ಬೇಟೆಗಾಗಿ ಹೊಂಚು ಹಾಕಿದರು.
ಗುಂಪಿನಲ್ಲಿದ್ದ ಒಬ್ಬಾತ ತನ್ನ ಬಳಿಯಿದ್ದ ನಾಡಾ ಬಂದೂಕಿನಿಂದ ಗುಂಡು ಹಾರಿಸಿ ನವಿಲಿನ ಹತ್ಯೆ ಬಳಿಕ ಮತ್ತೊಂದು ನವಿಲಿಗೆ ಗುರಿಯಿಟ್ಟಾಗ ಗುರಿ ತಪ್ಪಿ ಆಲ್ತಾಫಗೆ ತಗುಲಿದೆ ಎಂದು ಎಸ್ಪಿ ಮಾಹಿತಿ
ಬಳಿಕ ಅಲ್ತಾಪಗೌಸ ಶವವನ್ನು ತರಾರಿಯಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ದೂರು ಕೊಟ್ಟ ಕುಟುಂಬಸ್ಥರು ನವಿಲುಗಳು ಬೇಟೆ ವೇಳೆ ಅವಘಡ ಸಂಭವಿಸಿದೆ ಬಂದೂಕು ನವಿಲು ಮಾಂಸ ವಶಕ್ಕೆ ಪಡೆಯಲಾಗಿದೆ
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯೂ ಆರೋಪಿಗಳ ವಿರುದ್ಧ ಪ್ರಕರಣ ನಂದಗಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.