ಉ.ಕ ಸುದ್ದಿಜಾಲ ಅಥಣಿ :
ಬೆಳಗಾವಿ ಜಿಲ್ಲೆಯ ಕಾಗವಾಡ ಹಾಗೂ ಅಥಣಿ ಶಾಸಕರು ನ.25ರೊಳಗೆ ಅನಂತಪೂರ, ಬಳ್ಳಿಗೇರಿ ಗ್ರಾಮದ 60ಕ್ಕೂ ಅಧಿಕ ಜನ ರೈತರ ಜಮೀನಿನ ಪಹಣಿಯಲ್ಲಿ ನೋಂದಣಿಯಾದ ‘ವಕ್ಪ್’ ಹೆಸರು ತೆರವುಗೊಳಿಸಬೇಕು.
ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ತಾಲ್ಲೂಕಿನ ಅನಂತಪೂರ ಗ್ರಾಮದ ದರ್ಗಾದಲ್ಲಿ ನಡೆದ ರೈತರ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯ ನೇತೃತ್ವವಹಿಸಿ ಮಾತನಾಡಿದ ಮುಖಂಡ ಸಂಪತಕುಮಾರ ಶೆಟ್ಟಿ, ‘ಕೇವಲ ಎರಡು ಗ್ರಾಮಗಳ 60ಕ್ಕೂ ಅಧಿಕ ರೈತರ 500 ಎಕರೆಗೂ ಅಧಿಕ ಜಮೀನು ಪಹಣಿಯಲ್ಲಿ ‘ವಕ್ಪ್’ ಎಂದು 2018ರಲ್ಲಿ ನೊಂದಣಿಯಾಗಿದೆ. ಮುಖ್ಯಮಂತ್ರಿ ಅವರು ಇತ್ತೀಚಿನ ನೋಟಿಸ್ ಮರಳಿ ಪಡೆಯಲು ತಿಳಿಸಿದ್ದಾರೆ.
ಆದರೆ ಈ ಹಿಂದೆ ನೋಟಿಸ್ ಬಂದಿರುವ ರೈತರ ಪಾಡೇನು? ನಮ್ಮ ಮನವಿಗೆ ಸ್ಥಳೀಯ ಶಾಸಕರು ಸ್ಪಂದಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿಗೆ ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.
ಸಭೆಯಲ್ಲಿ ಅಪ್ಪನಗೌಡ ಬಿರಾದಾರ, ರಾಯಗೊಂಡ ಮೇತ್ರಿ, ರಾಜೇಸಾಬ ಮುಲ್ಲಾ, ಪೈಗಂಬರ ಮುಲ್ಲಾ, ಸಂಗಪ್ಪಗೌಡ ಪಾಟೀಲ, ರಾಜೇಸಾಬ ಮುಜಾವರ, ಶಂಕರ ಚವ್ಹಾಣ, ರಂಜಾನ ಮುಲ್ಲಾ, ದಾವಲ್ ಮುಲ್ಲಾ, ಗುಲಾಬ ಮುಲ್ಲಾ, ಅರಮಾನ ಮುಲ್ಲಾ, ನೂರಾಹ್ಮದ ಮುಜಾವರ, ನಬೀಸಾಬ ಮುಜಾವರ, ಶಂಸುದ್ದೀನ್ ಮುಲ್ಲಾ ಇತರರು ಇದ್ದರು.