ಉ.ಕ ಸುದ್ದಿಜಾಲ ಅಥಣಿ :
ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಹಿನ್ನಲೆಯಲ್ಲಿ ಸೋಮವಾರ ಅಥಣಿ ಜಿಲ್ಲಾ ಹೋರಾಟ ಸಮೀತಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಕರೆ ಕೊಟ್ಟಿದ್ದ ಅಥಣಿ ಬಂದ್ ಅತ್ಯಂತ ಯಶಸ್ವಿಯಾಯಿತು.
ಸೋಮವಾರ ಬೆಳಿಗ್ಗೆಯಿಂದ ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟುಗಳುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.
ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ರ್ಯಾಲಿಯನ್ನು ಪ್ರಾರಂಭ ಮಾಡಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಬಸವೇಶ್ಬರ ವೃತ್ತದಲ್ಲಿ ಸಮವೇಶಗೊಂಡಿತು.
ಈ ಸಮಾವೇಶದಲ್ಲಿ ಹತ್ತಕ್ಕು ಅಧಿಕ ಸಂಖ್ಯೆಯ ಮಠಾಧೀಶರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು, ಸಭೆಯನ್ನು ಉದ್ದೇಶಿಸಿ ಗಜಾನನ ಮಂಗಸೂಳಿ, ಷಹಜಹಾನ್ ಡೊಂಗರಗಾವ, ವಿನಾಯಕ ಬಾಗಡಿ, ಎ ಎಮ್ ಖೊಬ್ರಿ, ಅರುಣ ಯಲಗುದ್ರಿ, ಎಸ್ ಎ ಸಂಕ, ಶೇಖರ ನೇಮಗೌಡ ಸೇರಿದಂತೆ ಅನೇಕ ಗಣ್ಯರು ಮಾತನಾಡಿ ಅಥಣಿ ಜಿಲ್ಲೆಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲವಿದೆ ಎಂದರು.
ಅನಂತರ ಮಠಾಧೀಶರಾದ ಮರುಳಸಿದ್ದ ಮಹಾಸ್ವಾಮಿಗಳು, ಶಿವಬಸವ ಮಹಾಸ್ವಾಮಿಗಳು, ಪ್ರಭುಚನ್ನಬಸವ ಮಹಾಸ್ವಾಮಿಗಳು, ಸಿದ್ದಲಿಂಗ ಮಹಾಸ್ವಾಮಿಗಳು, ಅಮರೇಶ್ವರ ಮಹಾಸ್ವಾಮಿಗಳು, ಶಶಿಕಾಂತ ಪಡಸಲಗಿ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.
ಅಥಣಿ ಜಿಲ್ಲೆಗಾಗಿ ಸಿಎಂ ಅವರಿಗೆ ಆಗ್ರಹಿಸುವೆ : ಶಾಸಕ ಲಕ್ಷ್ಮಣ ಸವದಿ
ಅಖಂಡ ಬೆಳಗಾವಿ ಜಿಲ್ಲೆಯು ಕರ್ನಾಟಕದ ಎರಡನೇಯ ರಾಜಧಾನಿಯಾಗಲಿ, ಬೆಳಗಾವಿಯಿಂದ ಅಥಣಿಯನ್ನು ಪ್ರತ್ಯೇಕವಾಗಿಸಿ ಅಥಣಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಇಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಅಥಣಿ ಬಂದ ಮತ್ತು ಪ್ರತಿಭಟನಾ ಯಾರ್ಲಿ ಸಂದರ್ಭದಲ್ಲಿ ಮಾತನಾಡುತ್ತಾ ಬೆಳಗಾವಿ ದೊಡ್ಡ ಜಿಲ್ಲೆಯಾಗಿ ಮುಂದುವರೆಯಲಿ.
ಅಥಣಿಗೆ ಪಕ್ಕದ ಕ್ಷೇತ್ರಗಳಾದ ಕಾಗವಾಡ, ಕುಡಚಿ, ರಾಯಬಾಗ,ಹಾರುಗೇರಿಗಳ ಜೊತೆಗೆ ಬಾಗಲಕೋಟ ಜಿಲ್ಲೆಯ ಎರಡು ಕೇತ್ರಗಳನ್ನು ಸೇರಿಸಿಕೊಂಡು ಅಥಣಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದಲ್ಲಿ ಈ ಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಬೆಳಗಾವಿಗೆ ತಲುಪಬೇಕಾದಲ್ಲಿ ಸುಮಾರು ೨೦೦ ಕೀ.ಮಿ ದೂರ ಹೋಗಿ ಬರಬೇಕಾಗುತ್ತದೆ.
ಸಮಯವು ವ್ಯರ್ಥವು ಆಗುತ್ತದೆ ಅದನ್ನು ತಪ್ಪಿಸಿದಂತೆ ಆಗುವದರ ಜೊತೆಗೆ ಜನರಿಗೆ ಆಗುತ್ತಿರುವ ಬವಣೆ ನೀಗಿಸಿದಂತೆ ಆಗುತ್ತದೆ ಆಡಳಿತ್ಮಕವಾಗಿ ದೃಷ್ಟಿಯಿಂದ ಆಡಳಿತ ಜನರ ಸಮೀಪ ತರುವುದಕ್ಕೆ ಅಥಣಿ ಅನುಕೂಲರವಾಗಲಿದೆ. ಈ ಕುರಿತು ನಾನು ಬೆಳಗಾವಿ ಅಧಿವೇಶನದಲ್ಲಿ ದ್ವನಿ ಎತ್ತಲಿದ್ದನೆ ಎಂದರು.
ಅಖಂಡ ಬೆಳಗಾವಿ ಜಿಲ್ಲೆಯಲ್ಲಿ ಕೊನೆಯ ತಾಲೂಕು ಅಥಣಿ ಇರುವದರಿಂದ ಸುಗಮ ಆಡಳಿತ್ಮಾಕ ದೃಷ್ಟಿಯಿಂದ ಜಿಲ್ಲೆಯನ್ನು ವಿಭಾಗಿಸುವುದು ಅನಿವಾರ್ಯವು ಸೂಕ್ತವುವಾಗಿದೆ, ಈ ಭಾಗದ ಸಮಾನ ಮನಸ್ಕರ ಶಾಸಕರ ಜೊತೆಗೆ ಸೇರಿ ಸದನದಲ್ಲಿ ದ್ವನಿ ಎತ್ತಿ ರಾಜಕೀಯವಾಗಿಯೂ ಕಾವು ಪಡೆದುಕೊಳ್ಳುವಂತೆ ಮಾಡಲಾಗುವುದು ಎಂದರು.
ಬೆಳಗಾವಿ ಅಧಿವೇಶನ ನಡೆಯತ್ತಿರುವದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಪ್ರತ್ಯೇಕ ಜಿಲ್ಲೆಯ ಅಗತ್ಯತೆ ಕುರಿತು ಮನವರಿಕೆ ಮಾಡಕೊಡಲಾಗುವುದು ಎಂದು ತಿಳಿಸಿದರು