ಉ.ಕ ಸುದ್ದಿಜಾಲ ರಾಯಚೂರು :
ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ವಿಚಾರ ಈಗಾಗಲೇಎಲ್ಲಕಡೆ ಸದ್ದು ಮಾಡಿದೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಸ್ಥಳ ಆದೋನಿ ನವಾಬರು ನೀಡಿದ್ದು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಸ್ಥಳ ಆದೋನಿ ನವಾಬರು ನೀಡಿದ್ದು ಸಿಎಂ ಇಬ್ರಾಹಿಂ
ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ತೆರಳಿದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದು ಕೇಳಿದ್ದರು. ಆದ್ರಿಂದ ಆ ಜಾಗವನ್ನು ಮಂತ್ರಾಲಯ ಖಾಜಿಗೆ ನೀಡಿದ್ದು ರದ್ದು ಮಾಡಿ ಆದೋನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ನೀಡಿದ್ದರು.
ಈ ಕಥೆಯನ್ನ ಮಂತ್ರಾಲಯ ಸ್ವಾಮೀಜಿಗಳೇ ಹೇಳುತ್ತಾರೆ. ಅದರಂತೆ ಶೃಂಗೇರಿ ಶಾರದಾ ಪೀಠದ ಮೇಲೆ ಪೇಶಾವರು ದಾಳಿಗೆ ಬಂದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನ ಸ್ಥಾಪನೆ ಮಾಡಿದ್ದಾರೆ.
ಇದು ಇತಿಹಾಸ, ಇದು ನಮ್ಮ ಪರಂಪರೆ, ಇದು ನಮ್ಮ ಸಂಸ್ಕೃತಿ ಈ ಚಿಲ್ಲರೇ ಮುಂಡೆದವೂ ರಾಜಕಾರಣಕ್ಕೆ ಬಂದು ಈ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದರು.