ಉ.ಕ ಸುದ್ದಿಜಾಲ ಚಿಕ್ಕೋಡಿ :

ಮಾಜಿ ಸಂಸದ ಅಣ್ಣಾಸಾಬ ಜೊಲ್ಲೆ ಸೊತ್ತಿದ್ದು ಸ್ವಯಂ ಪ್ರೇರಿತ ಅಪರಾಧದಿಂದ ಸೋತ್ತಿದ್ದಾರೆ. ಚಿಕ್ಕೋಡಿಯಲ್ಲಿ ಬಿಜೆಪಿ‌ ಸೋತಿಲ್ಲ, ಮೋದಿ ಸೋತಿಲ್ಲ ಅಣ್ಣಾಸಾಬ ಜೊಲ್ಲೆ ಸೋತ್ತಿದ್ದಾರೆ ಚಿಕ್ಕೋಡಿ ಮಾಜಿ‌ ಸಂಸದ ಅಣ್ಣಸಾಬ ಜೊಲ್ಲೆ ವಿರುದ್ದ ಕಿಡಿ‌ಕಾರಿದ ಪ್ರಮೋದ ಮುತಾಲಿಕ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ಸಂಸ್ಥಾಪಕ‌ ಪ್ರಮೋದ ಮುತ್ತಾಲಿಕ ಆಕ್ರೋಶ ಅಹಂಕಾರ ಸೋಕಿನ‌ ವರ್ತನೆಯಿಂದ ಕಾರ್ಯಕರ್ತರ ಯಾವುದೇ ರೀತಿ ಸಂಪರ್ಕ ಇಲ್ಲದ ವ್ಯಕ್ತಿ ಅಣ್ಣಾಸಾಬ ಜೊಲ್ಲೆ.

ಬಿಜೆಪಿಯಿಂದ ಅತ್ಯಂತ ಕಡೆಗಣಿಸಿದ ವ್ಯಕ್ತಿ ಇವತ್ತು ಸೋಲನ್ನ ಅನುಭವಿಸಿದ್ದಾರೆ. ಲೋಕಸಭಾ ಕ್ಷೇತ್ರಗಳಲ್ಲಿ ಒಮ್ಮೆಯು ಕೂಡಾ ಪ್ರವಾಸ ಮಾಡದ ಎಂಪಿ ಯಾರಾದರೂ ಇದ್ದರೆ ಅದು ಅಣ್ಣಾಸಾಬ ಜೊಲ್ಲೆ. ನಿಮ್ಮನ್ನ ಸೋಲಿಸಿದ್ದು ನಿಮ್ಮ ಅಪರಾದದಿಂದ, ನಿಮ್ಮ ತಪ್ಪಿನಿಂದ ಸೋತಿದ್ದೀರಿ

ಬಿಜೆಪಿ‌ ಪಕ್ಷದಿಂದಲ್ಲ ನಿಮ್ಮ ಕಾರ್ಯಕರ್ತರಿಂದ ಅಣ್ಣಾಸಾಬ ಜೊಲ್ಲೆ ಸೋತಿಲ್ಲ. ಚಿಕ್ಕೋಡಿಯಲ್ಲಿ ಮೋದಿ ಗೆಲ್ಲಿಸಿ ಭಾರತ ಉಳಸಿ ಕಾರ್ಯಕ್ರಮ ಮಾಡಿದ್ದವಿ. ಆದರೆ ಕಾರ್ಯಕ್ರಮಕ್ಕೆ ಬರದೆ ಸೊಕ್ಕಿನ ವರ್ತನೆ, ಅಪಮಾನ ಮಾಡಿದರಿ.

ಮೋದಿ ಗೆಲ್ಲಿಸಿ ಭಾರತ ಉಳಸಿ ಕಾರ್ಯಕ್ರಮಕ್ಕೆ ಶಿವಮೊಗ್ಗದಿಂದ ಈಶ್ವರಪ್ಪ ಬಂದಿದ್ದರು. ಆದರೆ ಅಣ್ಣಾಸಾಬ ಜೊಲ್ಲೆ ಯಕ್ಸಂಬಾದಲ್ಲಿ ಮಲಗಿದ್ದರಲ್ಲ. ನಿಮ್ಮಗೆ ಹಿಂದೂಗಳ ಹಾಗೂ ಕಾರ್ಯಕರ್ತರ ಶಾಪ ತಟ್ಟಿದೆ ಎಂದು ಅಣ್ಣಸಾಬ ಜೊಲ್ಲೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರಮೋದ ಮುತ್ತಾಲಿಕ