ಉ.ಕ ಸುದ್ದಿಜಾಲ‌ ಬಾಗಲಕೋಟೆ :

ಸಚಿವ ಸತೀಶ್ ಜಾರಕಿಹೊಳಿ ಸಾಲು ಸಾಲು ಆರೋಪಕ್ಕೆ ಮೌನ ಮುರಿದ ಶಾಸಕ ಸವದಿ ಅಥಣಿಯಲ್ಲಿ ಬಿಜೆಪಿ ಲಿಟ್ ವಿಚಾರಕ್ಕೆ ಜಾರಕಿಹೊಳಿ ಸವದಿ ವಿರುದ್ಧ ವಾಗ್ದಾಳಿ.

ಅಥಣಿ ಶಾಸಕ‌ ಲಕ್ಷ್ಮಣ ಸವದಿ ಪ್ರತಿಕ್ರಿಯ

ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಲೀಡ್ ಆಗುವುದಕ್ಕೆ ಹಲವು ಕಾರಣಗಳು ಇರುತ್ತವೆ ನಾನು 2018 ರಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸೋತೆ.

ನಂತರ ಲೋಕಸಭಾ ಚುನಾವಣೆಯಲ್ಲಿ 36 ಸಾವಿರ ಮತಗಳು ಬಿಜೆಪಿ ಪಕ್ಷಕ್ಕೆ ಲಿಡ್ ಆಯ್ತು. ಕೆಲವು ಕ್ಷೇತ್ರಗಳಲ್ಲಿ ಪಾರಂಪರಿಕ ಮತ ಇರುತ್ತೆ ಅಭ್ಯರ್ಥಿ, ಮತ್ತು ಪಕ್ಷ ನೋಡಿ ಕೆಲವು ಸಲ ಮತದಾನ ಆಗುತ್ತದೆ

ಕಳೆದ ನನ್ನ ಚುನಾವಣೆ 76 ಸಾವಿರ ಮತ ಕಾಂಗ್ರೆಸ್ ಲಿಡ್ ಆಯ್ತು ಈ ಲೋಕಸಭಾ ಚುನಾವಣೆ 7 ಸಾವಿರ ಮತ ಮೈನಸಾಗಿದೆ. ಇದಕ್ಕೆ ಕೆಲವು ಕಾರಣಗಳು, ಮತ್ತು ದೋಷಗಳು ಇದ್ದಾವೆ.

ನಾನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೆನೆ. ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ ಅಥಣಿ ಶಾಸಕ ಲಕ್ಷ್ಮಣ್ ಸವದಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.