ಉ.ಕ ಸುದ್ದಿಜಾಲ ಮೋಳೆ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾಸ್ತು ಶಾಂತಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ  ಕಳಸಾರೋಹಣ ಅದ್ದೂರಿಯಾಗಿ ನಡೆಯಿತು. ಕಳೆದ ಮೂರು ದಿನಗಳಿಂದ ಶ್ರೀ 1008 ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ದರಮ  ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಗ್ರಾಮದ 108 ಸುಮಂಗಲೆಯರಿಂದ ಎರಡು ದಿನಗಳ ಕುಂಭಮೇಳ ಮೇಳದೊಂದಿಗೆ ನೆರವೇರಿತು.

ಕಳೆದ ಒಂದು ವಾರದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ಜರುಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರವಚನ ಆಲಿಸಿ ಪುನಿತರಾದರು. ಕಳೆದ ಎರಡ್ಮೂರು ದಿನಗಳಿಂದ  ಮಲ್ಲಿಕಾರ್ಜುನ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಶ್ರೀ ಬಸವ ದೇವರ ಮೂರ್ತಿ ಹಾಗೂ ಕಳಸದ ಜೊತೆಗೆ ಕುಂಭಮೇಳ ಸಕಲ ವಾಧ್ಯ ವೃಂದಗಳ ಜೊತೆ ಮೆರವಣಿಗೆ ಉತ್ಸವ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಿಗ್ಗೆ ದೇವತೆಗಳ ಹೋಮ, ಹವನ ಕಾರ್ಯಕ್ರಮ ನಡೆದವು ಸಾಯಂಕಾಲ ಜಗದ್ಗುರುಗಳನ್ನು ಅದ್ದೂರಿಯಾಗಿ ತೆರೆದ ವಾಹನದ ಮೂಲಕ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ನಂತರ ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ದರಾಮ ಅವರಿಂದ ದೇವಸ್ಥಾನ ಆವರಣದಲ್ಲಿ ಸೇರಿದ ಭಕ್ತರಿಗೆ ಆರ್ಶಿವಚನ ನೀಡಿದರು. ದೇವಸ್ಥಾನದ ಮೇಲಿರುವ ಕಳಸಗಳು ಮೊಬೈಲ್ ಟಾವರ ಇದ್ದಂತೆ. ಮೊಬೈಲ್ ಕೆಲಸ ಮಾಡಬೇಕಾದರೆ, ಟಾವರ ನೆಟ್‌ವರ್ಕ್ ಕನೆಕ್ಸೆನ್ ಕೊಡುತ್ತದೆ. ಹಾಗೆ ಕಳಸಗಳು ಕೂಡ ಭಕ್ತ  ಮತ್ತು ಭಗವಂತನ  ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತವೆ. ನಿಮ್ಮ ಭಕ್ತಿಯನ್ನು ಪರಮಾತ್ಮನಿಗೆ ತಲುಪಿಸುತ್ತವೆ. ಪರಮಾತ್ಮ ತನ್ನ ಆಶೀರ್ವಾದವನ್ನು ತಮಗೆ ತಂದು ತಲುಪಿಸುವ ಈ ಎರಡು ಕೆಲಸಗಳನ್ನು ಕಳಸ ಮಾಡುತ್ತದೆ ಎಂದು ಹೇಳಿದರು.

ದೇವಸ್ಥಾನದ ಮೇಲಿರುವ ಕಳಸ ಭಕ್ತರ ಭಕ್ತಿಯನ್ನು ತೆಗೆದುಕೊಂಡು ಹೋಗಿ ಪರಮಾತ್ಮನಿಗೆ ತಲುಪಿಸಿ ಆತ ನೀಡಿರುವ ಆಶೀರ್ವಾದವನ್ನು ಕ್ಷಣಾರ್ದದಲ್ಲಿ ಭಕ್ತರಿಗೆ ತಂದು ಮುಟ್ಟಿಸುವ ಈ ಎರಡು ಕಾರ್ಯಗಳನ್ನು ಕಳಸ ಮಾಡುತ್ತಿರುವದರಿಂದ ಎಲ್ಲಾ ದೇವಸ್ಥಾನಗಳ ಮೇಲೆ ಶೀಖರವನ್ನು ಕಟ್ಟಿ ಅದರ ಮೇಲೆ ಕಳಸವನ್ನು ಪ್ರತಿಷ್ಟಾಪಿಸುವ ಪರಂಪರೆ ಪ್ರಾಚೀಣ ಕಾಲದಿಂದಲೂ ನಡೆದು ಬಂದಿದೆ ಎಂದು ಜಗದ್ಗುರುಗಳು ಹೇಳಿದರು.

ಸಾಮಾನ್ಯವಾಗಿ ದೇವರ ಹತ್ತಿರ ಹೋಗಬೇಕಾದರೆ ಮೊದಲು ಗುರುಗಳ ಕಡೆಗೆ ಹೋಗಬೇಕು. ಗುರುಗಳನ್ನು ಕಡೆಗಣಿಸಿ ನೇರವಾಗಿ ದೇವರ ಬಳಿ ಹೋಗಲು ಸಾಧ್ಯವಿಲ್ಲ. ದೇವರು ನಿಮ್ಮನ್ನು ಸ್ವೀಕಾರ ಮಾಡಬೇಕಾದರೆ ಗುರು ನಿಮ್ಮನ್ನು ದೇವರು ಸ್ವೀಕಾರ ಮಾಡುವ ಹಾಗೆ ತಯಾರಿ ಮಾಡಿ ಕಳಿಸುತ್ತನೆ. ಅದಕ್ಕಾಗಿ ಗುರುಗಳ ಬಳಿ ಹೋಗಲೇಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಳಂಕ್ಕಿ ಹಿರೇಮಠದ ಷ.ಭ್ರ 108 ಶ್ರೀ ಗುರು ಶಿವಲಿಂಗ ಶಿವಾಚಾರ್ಯ ಶ್ರೀಗಳು ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಎಲ್ಲರು ಮಾಲೀಕರಾಗುತ್ತಿದ್ದಾರೇ ಹೊರತು ಯಾರು ಸೇವಕರಾಗುತ್ತಿಲ್ಲ. ಇದರಿಂದ ಮತಬೇಧಗಳು ಹುಟ್ಟುತ್ತಿವೆ. ಆದರೆ ಮೋಳೆ ಗ್ರಾಮದಲ್ಲಿ ಆ ವಾತಾವರಣವಿಲ್ಲ. ಗುರುಗಳಿಗೆ, ಹಿರಿಯರಿಗೆ ಗೌರವ ಕೊಡುವ ಒಳ್ಳೆಯ ಸಂಸ್ಕಾರ ಕಂಡು ಬರುತ್ತದೆ ಎಂದು ಆರ್ಶೀಚನ ನೀಡಿದರು.ಸಮಾರಂಭದಲ್ಲಿ ಶ್ರೀ ಬಸವ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಅನ್ನದಾನ ಸ್ವಾಮಿಗಳು ಆಶೀರ್ವಚನ ನೀಡಿದರು.
  ಸುಮಂಗಲೆಯರು ಪೂರ್ಣಕುಂಬಗಳನ್ನು ಹೊತ್ತು ಸಕಲ ವಾಧ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕರಥದಲ್ಲಿ  ಮೆರವಣಿಗೆ ನಡೆಸಿದರು, ನಂತರ ಪುಜ್ಯರಿಂದ ಕಳಸಾರೋಹಣ ನೆರವೇರಿತು. ನೂರಾರು ಭಕ್ತ ಮಂಡಳಿ ಉಪಸ್ಥಿತರಿದ್ದರು.

ಯುವಕರ ದುಶ್ವಟಗಳನ್ನು ದೂರ ಮಾಡಲು ಸುಕ್ಷೇತ್ರ ಯಡುರದಿಂದ ಶ್ರೀಶೈಲದವರೆಗೆ ಪಾದಯಾತ್ರೆ : ಶ್ರೀಶೈಲ ಜಗದ್ಗುರುಗಳು

ಸುಕ್ಷೇತ್ರ ಯಡುರದಿಂದ ಶ್ರೀಶೈಲದವರೆಗೆ 35 ದಿನಗಳವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಮುಖ್ಯ ಉದ್ದೇಶ ಎನೆಂದರೆ ಇಂದಿನ ಅಧುನಿಕ ಯುಗದಲ್ಲಿ ಯುವಕರು ಹಲವಾರು ದುಶ್ವಟಗಳಿಗೆ ಅಂಟಿಕೊಂಡು ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅಂಥವರ ದುಶ್ವಟಗಳನ್ನು ಬಿಡಿಸುವುದು, ಮಾರ್ಗ ಮದ್ಯದಲ್ಲಿ ಎಲ್ಲರಿಗೂ ಲಿಂಗದೀಕ್ಷೆ ನೀಡುವುದು ಮತ್ತು ರಸ್ತೆಯ ಎರಡು ಬದಿಗೆ ಗಿಡಗಳನ್ನು ನೆಡುವುದು ಈ ಮುರು ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಗುರುವಾರ ದಿ.೩ ರಂದು ಸಾಯಂಕಾಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಳಸಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು ಧರ್ಮಸಭೆಯನ್ನುದ್ಧೇಶಿಸಿ ಆಶೀರ್ವಚನ ನೀಡುತ್ತಿದ್ದರು. 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ  ಮಹೋತ್ಸವ ನಿಮಿತ್ಯ ಅಕ್ಟೋಬರ 29 ರಿಂದ ಜನೇವರಿ 14 – 2023 ರ ವರೆಗೆ ವಿವಿಧ ಧಾರ್ಮಿಕ, ಸಾಮಾಜಿಕ, ಹಾಗೂ ಜನ ಜಾಗೃತಿ  ಪಾದಯಾತ್ರಾ  ಜರುಗಲಿವೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರು ಪಾಲ್ಗೊಳ್ಳುವಂತೆ ಹೇಳಿದರು.

ಅಕ್ಟೋಬರ 29-2022 ರಂದು ಸುಕ್ಷೇತ್ರ ಯಡೂರದಿಂದ ಶ್ರೀಶೈಲಕ್ಷೇತ್ರದವರೆಗೆ ಪಾದಯಾತ್ರೆ ಪ್ರಾರಂಭವಾಗಲಿದ್ದು, ಪಾದಯಾತ್ರೆಯ ವೇಳಾಪಟ್ಟಿ ಮತ್ತು ಮುಕ್ತಾಯದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದೆಂದು ತಿಳಿಸಿದರು. ಮಾರ್ಗಮದ್ಯದಲ್ಲಿ ಬರುವ ಬರುವ ಗ್ರಾಮಗಳಲ್ಲಿ ಧರ್ಮ ಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ ಹಾಗೂ ಪಾದಯಾತ್ರೆಯ ಮಾರ್ಗದ ಎರಡೂ ಬದಿಗೆ ವೃಕ್ಷಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ದಿ.1-9-2022 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.

ಡಿಸೆಂಬರ ಮೊದಲ ವಾರದಿಂದ ಜನೇವರಿ 10 ರ ವರೆಗೆ ಲೋಕ ಕಲ್ಯಾಣಕ್ಕಾಗಿ ಶ್ರೀಶೈಲ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಪಂಡಿತಾರಾಧ್ಯ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ, ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ತುಲಾಭಾರ ರುದ್ರಹೋಮಮತ್ತು ಅನ್ನದಾನ ಕಾರ್ಯಕ್ರಮಗಳು ಸದ್ಬಕ್ತರಿಗೂ ಸೇವೆಸಲ್ಲಿಸಲು ಮತ್ತು ಪಾಲ್ಗೊಳ್ಳಲು ಅವಕಾಶವಿದೆ.

ಜನೇವರಿ 10, 2023 ರಿಂದ ದಿ.14 ರವರೆಗೆ ಅಖಿಲ ಭಾಋತ ವೀರಶೈವ  ಮಹಾಸಭೆಯ ಮಹಾ ಅಧಿವೇಶನ, ರಾಷ್ಟ್ರೀಯ ವೇದಾಂತ ಸಮಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮಸಮಾವೇಶ, ತೆಲಗು, ಕನ್ನಡ, ಮತ್ತು ಮರಾಠಿ ವೀರಶೈವ ಸಾಹಿತ್ಯ ಗೋಷ್ಠಿ ಉಚಿತ ಸಾಮೂಹಿಕ ವಿವಾಹ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.