ಉ.ಕ ಸುದ್ದಿಜಾಲ ಬಾಗಲಕೋಟೆ :

ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ ಅವರು ಇಂದು ಬೆಳಿಗ್ಗೆ 6.30 ಕ್ಕೆ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ- ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಬೆಳಗಿನ ಜಾವ ಸಾವನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಸಿದ್ದರಾಗಿದ್ದ ಇಬ್ರಾಹಿಂ ಸುತಾರ್ ಅವರ ಅಭಿಮಾನಿಗಳು ಅವರನ್ನ ಕಳೆದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಸೂಪ್ರಸಿದ್ದ ಭಾಷಣಕಾರರನ್ನ ಕಳೆದುಕೊಡಿದ್ದಾರೆ.

82 ವಯಸ್ಸಿನ ಇಬ್ರಾಹಿಂ ಸುತಾರ್, ಮಹಾಲಿಂಗಪುರ ಪಟ್ಟಣದಲ್ಲಿ ಸಾವನಪ್ಪಿದ್ದು. ಸಾರ್ವಜನಿಕ ದರ್ಶನಕ್ಕಾಗಿ ಸಿದ್ದತೆ ಮಾಡಲು ಮುಂದಾದ ಜಿಲ್ಲಾಡಳಿತ ಮಹಾಲಿಂಗಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ. ಸುತಾರ್ ಅವರ ಭಾವೈಕ್ಯ ನಿವಾಸಕ್ಕೆ ದೌಡಾಯಿಸ್ತಿರೋ ಜನರು, ಅಂತ್ಯಕ್ರಿಯೆ ಸಮಯದ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿರುವ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿರುವ ಅಂತ್ಯಕ್ರಿಯೆ.