ಉ.ಕ ಸುದ್ದಿಜಾಲ ವಿಜಯಪುರ‌ :

ಶಾಲಾಮಕ್ಕಳು ಪ್ರವಾಸಕ್ಕೆ  ಹೊರಟಿದ್ದ ಟೆಂಪೊ ಟ್ರಾವೆಲ್ಸ್ ಪಲ್ಟಿ ಓರ್ವ ಕ್ಲೀನರ್ ಸಾವನಪ್ಪಿದ್ದು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದು ಗಾಯಾಳು ವಿದ್ಯಾರ್ಥಿಗಳಿಗೆ ವಿಜಯಪೂರ ಜಿಲ್ಲೆ ತಾಳಿಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕದಲ್ಲಿರುವ ಪೋಷಕರು.

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ಸರ್ಕಾರಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟ್ರಾವೆಲ್ಸ್ ಪಲ್ಟಿಯಾಗಿದೆ. ಘಟನೆಯಲ್ಲಿ  ಟ್ರಾವೆಲ್ಸ್  ಕ್ಲೀನರ್ ದಾವಲಸಾಬ ಸಾಲವಾಡಗಿ (40) ಸಾವುನಪ್ಪಿದ್ದು, ಇನ್ನುಳಿದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ತಾಳಿಕೋಟಿ ತಾಲೂಕಿನ ಚೊಕಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು  ಕರೆದುಕೊಂಡು  ಆಲಮಟ್ಟಿಗೆ ಹೋಗಲಾಗುತ್ತಿದ್ದ ಟ್ರಾವೆಲ್ಸ್. ಕೆಲ ವಿದ್ಯಾರ್ಥಿಗಳಿಗೆ ತಮದಡ್ಡಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಇನ್ನುಳಿದ ವಿದ್ಯಾರ್ಥಿಗಳನ್ನ ತಾಳಿಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.