ಉ‌.ಕ ಸುದ್ದಿಜಾಲ ಮೋಳೆ :

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಇಂದು ಚಾಲನೆ ನೀಡಲಾಯಿತು.

ಮೋಳೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿದ ಮೋಳೆ ಗ್ರಾಮದ ಲೆಕ್ಕಾಧಿಕಾರಿ ಕೆ ಕೆ ಕುಲಕರ್ಣಿ, ಗ್ರಾಮ ಪಂಚಾಯತಿ ಅಧ್ಯಕ್ಷ ಭೂತಾಳಿ ಥರಥರೆ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ದಾಖಲೆ ತಲುಪಿಸಿದರು. ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಬೂತಾಳಿ ಥರಥರೆ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯನ್ನು ಈಗಾಗಲೇ ಪ್ರಾರಂಭ ಮಾಡಿದ್ದು, ತಮ್ಮಗೆ ಬೇಕಾದ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಮೋಳೆ ಗ್ರಾಮ ಲೆಕ್ಕಾಧಿಕಾರಿ ಕೆ.ಕೆ ಕುಲಕರ್ಣಿ ಮಾತನಾಡಿ ಪಹಣಿ, ಆರ್ ಟಿಸಿ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲಾತಿಗಳನ್ನು ಒಂದೇ ಸೂರಿನಡಿ ಉಚಿತವಾಗಿ ಕಲ್ಪಿಸುವ ಯೋಜನೆ ಇದಾಗಿದೆ. ಇದರ ಸದುಪಯೋಗವನ್ನ ಪ್ರತಿಯೊಬ್ಬ ಗ್ರಾಮಸ್ಥರು ಪಡೆದುಕೊಳ್ಳಬೇಕು. ಮೋಳೆ ಗ್ರಾಮದ ಗ್ರಾಮ ಒನ್ ಕೇಂದ್ರದ ಪ್ರತಿನಿಧಿಗಳು ಹಾಜರಿದ್ದು ಭಾರತ ಸರ್ಕಾರದ ಒಂದು ಯೋಜನೆಯಾದ ಆಯಶ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಎಲ್ಲ ಸದಸ್ಯರು ಸದರಿ ಯೋಜನೆ ಅಡಿಯಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಆಯುಷ್ಮಾನ ಕಾರ್ಡನ್ನು ಮಾಡಲು ತಿಳಿಸಿದರು.. ಮನೆ ಮನೆ ಬಾಗಿಲಿಗೆ ಆಯುಷ್ಮಾನ ಕಾರ್ಡನ್ನು ಮಾಡುವ ಒಂದು ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಆನಂದ ಕಣವಿ, ಸುಧಾಕರ ಚೊರಮುಲೆ, ಗುರು ಕಡಕೋಳ, ಬಸು ತೇಲಿ, ಬಸವರಾಜ ದೇವರಡ್ಡಿ, ಕುಮಾರ ಹರಳೆ ಹಾಗೂ ಗ್ರಾಮದ ಇತರ ಮುಖಂಡರು ಉಪಸ್ಥಿತರಿದ್ದರು.