ಉ.ಕ ಸುದ್ದಿಜಾಲ ರಾಯಬಾಗ :

ಅದೊಂದು ಪಟ್ಟಣ ಪಂಚಾಯತಿ ಆ ಪಟ್ಟಣ ಪಂಚಾಯತಿಗೆ ವರ್ಷಕ್ಕೆ ನೂರಾರು ಮನೆಗಳು ನಿರ್ಮಾಣ ಮಾಡಲು ಅನುದಾನ ಬರುತ್ತೆ ಆದರೆ, ಅಲ್ಲಿನ ಜನಪ್ರತಿನಿಧಿಗಳಿಗಳ ಹಾಗೂ ಅಧಿಕಾರಿಗಳ ಇಚ್ಚಾ ಶಕ್ತಿ ತೊಂದರೆಯಿಂದ ಈ ಬಡ ಕುಟುಂಬ ಮಳೆಗಾಲದಲ್ಲಿ ಗುಡಿ ಗುಂಡಾರಗಳಲ್ಲಿ ವಾಸಿಸುವ ಪರಸ್ಥಿತಿ ಈ ಬಡ ಕುಟುಂಬಕ್ಕೆ ಬಂದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣ ಪಂಚಾಯತಿಯ ಸೂರಿಗಾಗಿ ಸೋತು ಸುಣ್ಣವಾದ ಸೋನವ್ವನ ಕಥೆ ಕೇಳೋರೇ ಇಲ್ವಾ? ಕಳೆದ 20 ವರ್ಷಗಳಿಂದ ಒಡಕು ಮನೆಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆ ವ್ಯಾಪ್ತಿಯಲ್ಲಿ 20 ವರ್ಷಗಳು ಕಳೆದರೂ ವಸತಿ ಯೋಜನೆಯಡಿಯಲ್ಲಿ ಮನೆ ಸಿಕ್ಕಿಲ್ಲ

ಬೀಳುವ ಸ್ಥಿತಿಯಲ್ಲಿರುವ ಒಡಕು ಮನೆಯಲ್ಲಿಯೇ ಪುಟಾಣಿ ಮಕ್ಕಳೊಂದಿಗೆ ನಿತ್ಯ ಪ್ರಾಣ ಭೀತಿಯಲ್ಲಿ ಜೀವನ ಸಾಗಿಸುತ್ತಿರುವ ಸೋನವ್ವ ಪೂಜೇರಿ ಕುಟುಂಬ. ಕಳೆದ 80 ವರ್ಷಗಳ ಹಿಂದೆ ಕಲ್ಲು ಮಣ್ಣಿನಿಂದ ನಿರ್ಮಾಣ ಮಾಡಿರುವ ಮನೆ ಇಂದು ನಾಳೆ ಬೀಳುವ ಹಂತದಲ್ಲಿದೆ.

ಸೂರಿಗಾಗಿ ಅಂಗಲಾಚ್ಚುತ್ತಿರುವ ಸೊನವ್ವ

ಪ್ರತಿ ವರ್ಷ ಮಳೆಗೆ ಹಾನಿಯಾದ ಮನೆಗಳ ಸಮೀಕ್ಷೆ ಹಾಗೂ ವಸತಿ ನಿರಾಶ್ರಿತರ ಸಮೀಕ್ಷೆ ಮಾಡಿದ್ದೆ ಮಾಡಿದ್ದು. ಇವರು ಮಾಡಿರುವ ಸರ್ವೆಯಲ್ಲಿ ಈ ಮನೆ ಕಾಣಿಸಲೇ ಇಲ್ಲಾ ಇಲ್ಲಿಯವರೆಗೆ ಅಧಿಕಾರಿಗಳು ಮಾಡಿರುವ ಸಮೀಕ್ಷೆ ಪ್ರಕಾರ ಇವರು ಮನೆಗಳನ್ನು ಕೊಟ್ಟಿದ್ದಾದರೂ ಯಾರಿಗೆ. ಸೋನವ್ವ ಪೂಜೇರಿ ತನ್ನ ಇಬ್ಬರು ಗಂಡು ಮಕ್ಕಳು, ಇಬ್ಬರು ಸೊಸೆ ಹಾಗೂ ಪುಟಾಣಿ ಮೊಮ್ಮಕ್ಕಳೊಂದಿಗೆ ಇಂತಹ ಒಡಕು ಮನೆಯಲ್ಲಿ ವಾಸ ಮಾಡುತ್ತಿರುವುದು ಇವರ ಗಮನಕ್ಕೆ ಇಲ್ವಾ.

ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು
ನಮ್ಮ ಕೇರಿಗೆ (ಓಣಿ, ಕಾಲೊನಿ) ಬಂದು, ವಸತಿ ರಹಿತ ಹಾಗೂ ಶೀತಲಗೊಂಡ ಮನೆಗಳ ಸಮೀಕ್ಷೆಯನ್ನು ಮಾಡಿಕೊಂಡು ಹೋಗಿದ್ದಾರೆ. ನಾವು ಕೂಡ ಸಮೀಕ್ಷೆ ಮಾಡಿ ಕೊಟ್ಟಿದ್ದೇವೆ. ಆದರೆ ಆ ಸಮೀಕ್ಷೆ ಏನಾಯಿತು. ಎಲ್ಲಿ ಹೋಯಿತು ಎನ್ನುವುದೇ ತಿಳಿಯುತ್ತಿಲ್ಲ.

ಕಾಟಾಚಾರಕ್ಕಾಗಿ ಸಮೀಕ್ಷೆ ನಡಿಸಿದ್ರಾ? ನೊಂದವರ ಕಣ್ಣೀರು ಒರೆಸೋ ನಾಟಕ ಆಡಿದ್ರೆ ಇಂತಹ ಅವ್ಯವಸ್ಥೆ ಅನಿವಾರ್ಯತೆಯಲ್ಲಿ ಜೀವನ ಸಾಗಿಸುತ್ತಿರುವ ಸೋನವ್ವ ಪೂಜೇರಿ ಯವರ ಕುಟುಂಬದ ನೆರವಿಗೆ ಬಾರದ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಇಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎನ್ನುವುದೇ ನಮಗೆ ತಿಳಿಯುತ್ತಿಲ್ಲ ಎನ್ನುವುದು ಸ್ಥಳೀಯರ ಗಂಭೀರ ಆರೋಪವಾಗಿದೆ.