ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಕೆಎಲ್ಇ ವೈದ್ಯರಿಂದ ಅಪರೂಪದ ಸಾಧನೆ. ಭ್ರೂಣದೊಳಗೆ ಬೆಳೆದಿದ್ದ ಮತ್ತೊಂದು ಭ್ರೂಣದ ಯಶಸ್ವಿ ಶಸ್ತ್ರಚಿಕಿತ್ಸೆ. ಬೆಳಗಾವಿ ಕೆಎಲ್ಇ ಆಸ್ಪತ್ರೆ ವೈದ್ಯರಿಂದ ಮಹಾರಾಷ್ಟ್ರ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ.
2 ದಿನಗಳ ಶಿಶುವಿಗೆ ಕೆಎಲ್ಇ ಆಸ್ಪತ್ರೆ ವೈದ್ಯರಿಂದ ಶಸ್ತ್ರಚಿಕಿತ್ಸೆ. ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಚಂದಗಡ ಮೂಲದ 7 ತಿಂಗಳ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ. ಗರ್ಭಿಣಿ ಮಹಿಳೆ ತಪಾಸಣೆ ಮಾಡಿದಾಗ ಭ್ರೂಣದೊಳಗೆ ಮತ್ತೊಂದು ಭ್ರೂಣ ಬೆಳೆದಿರೋದು ಕಂಡುಬಂದಿದೆ.
ಸದ್ಯ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಎರಡು ದಿನದ ಭ್ರೂಣ ಹೊರ ತೆಗೆದಿದ್ದಾರೆ. ಬಾಣಂತಿ ಮಹಿಳೆ, ಮಗು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರ ಮಾಹಿತಿ. ಕೆಎಲ್ಇ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಸ್ವಪ್ನಿಲ್ ಪಟ್ಟಣಶೆಟ್ಟಿ, ಡಾ.ಸಕ್ಷಮ. ಅರವಳಿಕೆ ತಜ್ಞ ಡಾ.ರಾಜೇಶ ಮಾನೆ, ಡಾ.ಪ್ರಿಯಾಂಕಾ ಗಾಡವಿ ವೈದ್ಯರಿಂದ ಅಪರೂಪದ ಸಾಧನೆ.
2 ದಿನಗಳ ಶಿಶುವಿಗೆ ಕೆಎಲ್ಇ ಆಸ್ಪತ್ರೆ ವೈದ್ಯರಿಂದ ಶಸ್ತ್ರಚಿಕಿತ್ಸೆ
