ಕಾಗವಾಡ :
ಕರ್ನಾಟಕದ ಗಡಿ ಭಾಗದಲ್ಲಿ ಸರಿಯಾದ ಆಸ್ಪತ್ರೆಗಳು ಇಲ್ಲದೆ ಇರುವುದರಿಂದ ಮಹಾರಾಷ್ಟ್ರದ ಆಸ್ಪತ್ರೆಗೆ ತೆರಳಬೇಕಾದ ಕರ್ನಾಟಕದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ದೊಡ್ಡವರು ಬಂದ್ರೆ ಸೆಲ್ಯೂಟ್ ಹೊಡೆದು ಮಹಾರಾಷ್ಟ್ರ ಪ್ರವೇಶಕ್ಕೆ ಅವಕಾಶ ಕೊಡ್ತಾರೆ, ನಮ್ಮಂಥ ಬಡವರು ಬಂದ್ರೆ ನಿಲ್ಲಿಸಿ ವಿಚಾರಣೆ ಮಾಡ್ತಾರೆ, ಇದೆಂಥ ಸರ್ಕಾರ ಇವರೇಂಥ ರೂಲ್ಸ್ ಮಾಡ್ತಾರೆ ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ಚಕ್‌ಪೊಸ್ಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ ನ ಕನ್ನಡಿಗ.
ಕ್ಯಾನ್ಸರ್ ಪೇಷಂಟ್ ಮೀರಜ್ ನಲ್ಲಿ ಅಡ್ಮಿಟ್ ಮಾಡಿದಿನಿ ನಾನು ಅಲ್ಲಿಗೆ ಹೋಗಬೇಕಿದೆ. ಕೇವಲ 10 ಕಿ.ಮಿ ಪ್ರಯಾಣಕ್ಕೆ ಆಟೋದವರು 80 ರೂಪಾಯಿ ವಸೂಲಿ ಮಾಡ್ತಾರೆ, ನಮ್ಮಂಥವರು ಎಲ್ಲಿಗೆ ಹೋಗ್ಬೇಕು ನೀವೇ ಹೇಳಿ ಅಂತ ಆಕ್ರೋಶ ಹೊರ ಹಾಕಿದ ಪ್ರಯಾಣಿಕ. ಬಸ್ ಇಲ್ಲದೆ ಗಡಿಯಲ್ಲಿ ಪ್ರಯಾಣಿಕರ ಪರದಾಟ, ಬಸ್ ಸಿಗದೆ ಪೇಷಂಟ್ ಬಳಿ ಹೋಗಲು ಆಗದೆ ಪರದಾಡಿದ ಕರ್ನಾಟಕದ ಪ್ರಯಾಣಿಕ.