ಬಾಗಲಕೋಟೆ :

ನಕಲಿ ಬಂಗಾರ ಕೊಟ್ಟು ಅಸಲಿ‌ ಬಂಗಾರ ಲಪಟಾಯಿಸುತ್ತಿದ್ದ ಇಬ್ಬರು ಕಳ್ಳಿಯರ ಬಂಧನ, ಬಂಧಿತ ಆರೋಪಿಗಳು ಬೆಂಗಳೂರು ಮೂಲದವರು ಬೆಂಗಳೂರಿನ‌ ಕನಕಾನಗರದ ನಿವಾಸಿ ರೆಹಾನಾಬೇಗಮ್(45), ವಿಮಾನನಗರದ ನಿವಾಸಿ ಮೆಹರಜಾನ್ (49)‌ಬಂಧಿತ ಆರೋಪಿಗಳು

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಚಿನ್ನಾಭರಣ ಅಂಗಡಿಯಲ್ಲಿ ಗೋಲ್‌ಮಾಲ್‌ ಮಾಡಿದ್ದ ವಂಚಕಿಯರು, ಇಳಕಲ್‌ ನಗರದ ಬಂಗಾರದ ಅಂಗಡಿಯೊಂದರಲ್ಲಿ ತಾವು ತಂದಿದ್ದ ನಕಲಿ ಬಂಗಾರ ಕೊಟ್ಟು‌ ಅಸಲಿ ಬಂಗಾರ ಒಯ್ದಿದ್ದ ಕಿಲಾಡಿಗಳು. ಒಂದು ಲಕ್ಷ ಎಂಭತ್ತಾರು ಸಾವಿರದ ನಾಲ್ಕನೂರಾ ಇಪ್ಪತ್ತು ರೂಪಾಯಿ‌ಮೌಲ್ಯದ 36.450 ಗ್ರಾಂ ಬಂಗಾರದ ಆಭರಣಗಳು ಹಾಗೂ ಹದಿಮೂರು ಸಾವಿರ ರೂಪಾಯಿ ನಗದು ಒಯ್ದಿದ್ದ ಮಹಿಳೆಯರು.

ಡಿಸೆಂಬರ್ 10 ರಂದು ಅಸಲಿ ಬಂಗಾರ ಒಯ್ದಿದ್ದ ವಂಚಕಿಯರು. ಈ ಕುರಿತು ಬಂಗಾರದ ಅಂಗಡಿ ಮಾಲೀಕ ಹರೀಶ ವರ್ಣೇಕರ್ ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹುನಗುಂದ‌ ಸಿಪಿಐ ಹೊಸಕೇರಪ್ಪ‌ನೇತೃತ್ವದ‌ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದೆ. ಬಂಧಿತರಿಂದ ಒಂದು ಲಕ್ಷ ಎಂಭತ್ತಾರು ಸಾವಿರದ ನಾಲ್ಕನೂರಾ ಇಪ್ಪತ್ತು ರೂಪಾಯಿ‌ಮೌಲ್ಯದ 36.450 ಗ್ರಾಂ ಬಂಗಾರದ ಆಭರಣಗಳು ಹಾಗೂ ಹದಿಮೂರು ಸಾವಿರ ರೂಪಾಯಿ ನಗದು ಮತ್ತು ಇದೇ ರೀತಿ‌ ಬೇರೆಡೆ ಲಪಟಾಯಿಸಿದ ಅಂದಾಜು ಒಂದು ಲಕ್ಷ ಮೌಲ್ಯದ 36.970ಗ್ರಾಂ ಚಿನ್ನಾಭರಣಗಳು‌ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.