ಬೆಳಗಾವಿ :

ದಿನಂಪ್ರತಿ ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ಸರ್ಕಾರ ಬೆಲೆ ನಿಗಧಿ ಮಾಡಿದೆ. ಆದರೆ, ರೈತ ಕಷ್ಟ ಪಟ್ಟು ಬೆಳೆದ ಕಬ್ಬಿನ ಬೆಳೆಗೆ ಬೆಲೆ ನಿಗಧಿ ಇಲ್ಲ. ಮಂಡ್ಯ ಜಿಲ್ಲೆಯನ್ನ ಹೊರತು ಪಡಿಸಿದರೆ ಕುಂದಾನಗರಿ ಬೆಗಾವಿಯಲ್ಲಿ ಅತಿ ಹೆಚ್ಚಾಗಿ ಕಬ್ಬು ಬೆಳೆಯನ್ನ ಬೆಳೆಯಲಾಗುತ್ತೆ. ಆದರೆ, ರೈತರಿಗೆ ಮಾತ್ರ ಕಬ್ಬಿಗೆ ನಿಗಧಿತ ಬೆಲೆ ಇಲ್ಲದೆ ಇರುವುದರಿಂದ ಗಡಿ ಭಾಗದ ರೈತರು ಕಂಗಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಈ ಭಾಗದ ಕಬ್ಬು ಸರಾಸರಿ 11 ರಿಂದ 12.5 ರಷ್ಟು ಸಕ್ಕರೆ ಅಂಶವನ್ನು ಹೆಚ್ಚಾಗಿ ಹೊಂದಿದ್ದು, ಹಾಗಾಗಿ ಕಬ್ಬಿಗೆ ಸರಿ ಸುಮಾರು 4,000 ರೂಪಾಯಿ ದರವನ್ನು ಸರ್ಕಾರ ಘೋಷಣೆ ಮಾಡಬೇಕಾಗಿತ್ತು. ಆದರೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ ಆಯುಕ್ತರು, ಸರ್ಕಾರ, ಸಚಿವರು ಸಕ್ಕರೆ ಕಾರ್ಖಾನೆ ಜೊತೆ ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕಬ್ಬು ಬೆಳೆಗಾರರು ಆರೋಪಿಸುತ್ತಿದ್ದಾರೆ.

ಈ ವರ್ಷದ ಹಂಗಾಮಿಗೆ 12 ರಿಕವರಿ ಇರುವ ಒಂದು ಟನ್ ತೂಕದ ಕಬ್ಬಿಗೆ ಸರ್ಕಾರ 3,200 ರೂಪಾಯಿ ಘೋಷಣೆ ಮಾಡಿದೆ. ಆದರೆ, ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ 2,500 ರಿಂದ 2,700 ರೂಪಾಯಿ ಹೀಗೆ ಮನಬಂದಂತೆ ದರವನ್ನು ನೀಡುತ್ತಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ಆಡಿದ್ದೇ ಆಟವಾಗಿದೆ. ಸರ್ಕಾರ ಸೂಕ್ತ ಬೆಲೆ ಘೋಷಿಸುವ ಮೂಲಕ ಈ ಭಾಗದ ಕಬ್ಬು ಬೆಳೆಗಾರರ ಹಿತ ಕಾಯಬೇಕಿದೆ. ನಮ್ಮ ಉತ್ತರ ಕರ್ನಾಟಕ ಭಾಗದವರೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದು ನಮ್ಮಗೆ ಖುಷಿ ಆಗಿದೆ. ಆದರೆ, ಉತ್ತರ ಕರ್ನಾಟಕ ಜನರಿಗೆ ಮೋಸವಾಗುತ್ತಿದ್ದರು ಸುಮ್ಮನಿದ್ದಾರೆ. ಉತ್ತರ ಕರ್ನಾಟಕ ಜನತೆಗೆ ಬೆಂಬಲಿಸಿ ಕಬ್ಬಿನ ಬೆಲೆ ನಿಗಧಿ ಮಾಡಿ ಎಂದು ರೈತರು ಸಿಎಂ ಬೊಮ್ಮಾಯಿಗೆ ಆದೇಶಿಸಿದ್ದಾರೆ

ಮಹಾರಾಷ್ಟ್ರದಲ್ಲಿ ಪ್ರತಿ ಒಂದು ಟನ್ ಕಬ್ಬಿಗೆ 3,200 ರಿಂದ 3,400 ರೂಪಾಯಿ ದರ ನಿಗದಿ ಪಡಿಸಿಲಾಗಿದೆ. ನಮ್ಮ ರಾಜ್ಯದ ಕಾರ್ಖಾನೆಗಳು 2,500 ರಿಂದ 2,700 ರೂಪಾಯಿ ರೈತರಿಗೆ ನೀಡುತ್ತಿವೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಪ್ರತಿ ಒಂದು ಟನ್ ಕಬ್ಬಿಗೆ 500 ರೂಪಾಯಿ ವ್ಯತ್ಯಾಸ ಕಂಡು ಬರುತ್ತಿದೆ. ಯಾಕೆ ರಾಜ್ಯ ಸರ್ಕಾರ ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳು ಎಲ್ಲವೂ ರಾಜಕಾರಣಿಗಳ ಒಡೆತನದಲ್ಲಿವೆ. ಹಾಗಾಗಿ ಅವರಿಗೆ ಹೇಳೋರೋ, ಕೇಳೋರು ಯಾರೂ ಇಲ್ಲದಂತಾಗಿದೆ. ಹಲವಾರು ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬು ಪೂರೈಕೆ ಮಾಡಿದ ಕೋಟ್ಯಂತರ ರೂಪಾಯಿ ಹಣವನ್ನು ಇದುವರೆಗೂ ಸಂದಾಯ ಮಾಡಿಲ್ಲ. ಸಿಎಂ ಬೊಮ್ಮಾಯಿ ಅವರು ಸಿಎಂ ಆದ ಮೇಲೆ ರೈತರಿಗೆ ಏನಾದರೂ ಸಹಾಯ ಮಾಡುತ್ತಾರೆ ಎಂಬುವುದು ಕನಸಾಗಿಯೇ ಉಳಿದಿದೆ.

ಒಟ್ಟಿನಲ್ಲಿ ತಾನೂ ಬೆಳೆದ ಬೆಲೆಗೆ ನಿಗಧಿತ ಬೆಲೆ ಇಲ್ಲ. ಕಾರ್ಖಾನೆಯವರ ಆಟಕ್ಕೆ ತಕ್ಕಂತೆ ರೈತರು ಕುಣಿಯುವಂತ ಪರಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರ ಇದಕ್ಕೆ ಮುಗದಾರ ಹಾಕಬೇಕಿದೆ. ಚಳಿಗಾಲ ಅಧಿವೇಶನಕ್ಕೂ ಮೊದಲೇ ಕಬ್ಬಿಗೆ ನಿಧಿತ ಬೆಲೆ ಘೋಷಣೆ ಮಾಡಿ ಎಂದು ರೈತರು ಆಗ್ರಹಿಸಿದ್ದಾರೆ.