ಉ.ಕ ಸುದ್ದಿಜಾಲ ಬೆಳಗಾವಿ :

ಇಂದು ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಾಲು ಸಾಲು ಪ್ರತಿಭಟನೆಗಳ ಕಿಚ್ಚು. ಹೆಚ್ಚುತ್ತಿರುವ ಚಳಿಯ ನಡುವೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬೆಳಗಾವಿಯಲ್ಲಿ ನಡೆಯಲಿರುವ ಒಟ್ಟು ಹತ್ತು ಪ್ರತಿಭಟನೆಗಳು.

ಆನ್ ಲೈನ್ ಜೂಜು ನಿಷೇಧಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಸಾರ್ವಜನಿಕ ಹಿತದೃಷ್ಟಿಯ ಪ್ರತಿಭಟನೆ ಕೊಂಡಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಭೋವಿ ಸಮಾಜದಿಂದ ವಿ ಎಸ್ ಉಗ್ರಪ್ಪ ವರದಿ ಶಿಫಾರಸ್ಸು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಪ್ರತಿಭಟನೆ.

ಸುವರ್ಣ ಸೌಧ ಪಕ್ಕದಲ್ಲಿರುವ ಸುವರ್ಣ ಗಾರ್ಡನ ಬಳಿ‌ ಸಾಲು ಸಾಲು ಪ್ರತಿಭಟನೆಗಳು ಮಾದಿಗ ಮೀಸಲಾತಿ ಸಮಾಜದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಸಮಾವೇಶ. ಸಾವಿರಾರು ರೈತರಿಂದ ಕಬ್ಬಿನ ಬೆಳೆಗೆ ಪ್ರತಿ ಟನ್ನಿಗೆ ಆರು ಸಾವಿರ ನೀಡುವಂತೆ ಮತ್ತು ರೈತರಿಗೆ ಹನ್ನೆರಡು ಗಂಟೆಗಳ ಕಾಲ ಥ್ರಿಪೇಸ್ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ.

ಕರ್ನಾಟಕ ನೀವೃತ್ತ ನೌಕರರ ವೇದಿಕೆಯ ಕೇಂದ್ರ ಸಮೀತಿಯಿಂದ 2022 ರಿಂದ 2024 ರ ಸಾಲಿನ ನಿವೃತ್ತ ನೌಕರರಿಗೆ ಏಳನೆ ವೇತನ ಆಯೋಗದ ನಿಯಮಗಳನ್ನು ಅಳವಡಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಪ್ರತ್ಯೇಕ ಕದಂಬ ಜಿಲ್ಲಾ ರಚನೆ ಹೋರಾಟಗಾರರಿಂದ
ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕು ವಿಭಜಿಸಿ ಹೊಸ ಜಿಲ್ಲೆ ರಚಿಸುವಂತೆ ಆಗ್ರಹಿಸಿ ಪ್ರತಿಭಟನೆ.

ಕರ್ನಾಟಕ ರಾಜ್ಯ ಪತ್ರಕರ್ತರ ಧ್ವನಿ ಸಂಘದಿಂದ ಪತ್ರಕರ್ತರಿಗೆ ಉಚಿತ ಬಸ್ ಪಾಸ್,ಪತ್ರಕರ್ತರ ರಕ್ಷಣಾ ಕಾಯ್ದೆಯ ತಿದ್ದುಪಡಿ ಮತ್ತು ಟೋಲ್ ಗೇಟ್ ಗಳಲ್ಲಿ ಉಚಿತ ಪ್ರವೇಶಕ್ಕೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನೆ.