ಉ.ಕ‌ ಸುದ್ದಿಜಾಲ‌ ಕಿತ್ತೂರ :

ಗ್ಯಾರಂಟಿ ಗದ್ದಲ, ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿರುವ ಜನ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ವಿದ್ಯುತ್ ಬಿಲ್ ಪಾವತಿಗೆ ಜನರ ಹಿಂದೇಟು. ವಿದ್ಯುತ್ ಪಾವತಿ ನಿರಾಕರಿಸುತ್ತಿರುವ ವೀರಾಪೂರ ಗ್ರಾಮಸ್ಥರು. ವಿದ್ಯುತ್ ಬಿಲ್‌ ಕೇಳಲು ಹೋದ ಹೆಸ್ಕಾಂ ಸಿಬ್ಬಂದಿಗೆ ಬರಿಗೈಯಲ್ಲಿ ವಾಪಸ್
ಕಾಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 24 ಗಂಟೆಯೊಳಗೆ 200 ಯುನಿಟ್ ಫ್ರೀ ಎಂದು  ಹೇಳಿದೆ.

ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಎನ್ನುತ್ತಿರುವ ಜನ. ಸರ್ಕಾರದ ಆದೇಶ ಇನ್ನೂ ಬಂದಿಲ್ಲ, ಅಲ್ಲಿಯವರೆಗೆ ಬಿಲ್ ಪಾವತಿಸಿ ಎಂದ ಹೆಸ್ಕಾಂ ಸಿಬ್ಬಂದಿ. ವಿದ್ಯುತ್ ಬಿಲ್ ಪಾವತಿಸದಿದ್ದರೆ ಮೀಟರ್ ಬಂದ್ ಮಾಡ್ತೀವಿ ಎಂದ ಸಿಬ್ಬಂದಿ.

ಮೀಟರ್ ಬಂದ್ ಮಾಡಿ, ಎಲ್ಲವನ್ನೂ ಕಾಂಗ್ರೆಸ್ ‌ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೆಸ್ಕಾಂ ಸಿಬ್ಬಂದಿಗೆ ಜನರ ಉತ್ತರ ಗ್ರಾಹಕರು ಹಾಗೂ ಹೆಸ್ಕಾಂ ‌ಸಿಬ್ಬಂದಿಯ ನಡುವೆ ವಿದ್ಯುತ್ ಬಿಲ್ ಗಾಗಿ ವಾಗ್ವಾದ.