ಉ.ಕ‌ ಸುದ್ದಿಜಾಲ ಅಥಣಿ :

ಹುಬ್ಬಳ್ಳಿಯ ಕಂದಮ್ಮನ ಅತ್ಯಾಚಾರ,ಪ್ರಕರಣ ಮಾಸುವ ಮುನ್ನವೆ ಗಡಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ವ್ಯಾಪ್ತಿಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಕೇಸ್ ಬೆಳಕಿಗೆ ಬಂದಿದೆ.

ಮಹಾಂತೇಶ ಹನಮಂತ ಹಿಪ್ಪರಗಿ ನೀಚ ಕೃತ್ಯ ವೆಸಗಿದ್ದ ವ್ಯಕ್ತಿ ಎಂದು ಆರೋಪಿಸಲಾಗಿದೆ.ನಿನ್ನೆ ಬೆಳಿಗ್ಗೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವಂದರ ತೋಟದ ವಸತಿಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆರೋಪಿ ಮಹಾಂತೇಶ ಬಾಲಕಿಗೆ ಅತ್ಯಾಚಾರ ವೇಶಗಲು ಪ್ರಯತ್ನಿಸಿದ್ದಾನೆ.

ಬಾಲಕಿ ಜೋರಾಗಿ ಚಿರಾಡಿ ಮನೆ ಹೊರಗಡೆ ಓಡಿ ಬಂದಿದ್ದಾಳೆ ತಕ್ಷಣ ಸ್ಥಳೀಯರು ಆಕೆಯನ್ನ ರಕ್ಷಣೆ ಮಾಡಿದ್ದಾರೆ. ಸದ್ಯ ಮಹಾಂತೇಶ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು. ವಿಚಾರಣೆ ಮುಂದುವರೆದಿದೆ.