ಹಾಸನ :

ಪುನೀತ್ ರಾಜ್‌ಕುಮಾರ್ ಫೋಟೋಗೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿಸಿದ ಅಭಿಮಾನಿಗಳು, ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಕಳ್ಳಿಮುದ್ದನಹಳ್ಳಿ ಗ್ರಾಮದ ಯುವಕರಿಂದ ಅಪ್ಪುವಿಗೆ ದರ್ಶನ

ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶಬರಿಮಲೆಗೆ ಹೋಗಿ ಪೂಜೆ ಸಲ್ಲಿಸುವ ಗ್ರಾಮದ ಜಾಗ್ವರ್ ಬಾಯ್ಸ್ ತಂಡದ ಯುವಕರು. ಅದೇ ರೀತಿ ಈ ವರ್ಷವೂ ಶಬರಿಮಲೆಗೆ ತೆರಳಿ ಪೂಜೆ ಸಲ್ಲಿಸಿರುವ ಯುವಕರು. ಪುನೀತ್ ರಾಜ್‌ಕುಮಾರ್ ವಿಧಿವಶರಾದಾಗ ಗ್ರಾಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಯುವಕರು

ಅಂದೇ ಪುನೀತ್ ರಾಜ್‍ಕುಮಾರ್ ಫೋಟೋಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿಸಲು ನಿರ್ಧರಿಸಿದ್ದ ಯುವಕರು. ಅದರಂತೆ ಶಬರಿಮಲೆಗೆ ತೆರಳಿ ಪುನೀತ್ ಫೋಟೋಗೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿಸಿದ ಯುವಕರ ತಂಡ