ಉ.ಕ ಸುದ್ದಿಜಾಲ ಚಿಕ್ಕೋಡಿ :

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಘಟ್ಟಿ ಬಸವನ ಬಳಿ ಮುಖ್ಯ ರಸ್ತೆಯ ಪಕ್ಕದ ಕಾಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಕರೋಶಿ ಗ್ರಾಮದ ಸುನೀಲ ಮಹಾದೇವ ಸಾಳುಂಕೆ (25) ಎಂಬ ಯುವಕನ ಶವ ಎಂದು ಗುರುತಿಸಲಾಗಿದೆ. ಮಹಾದೇವ ಸಾಳುಂಕೆ ಹಾಗೂ ಜೈನಾಪೂರ ಗ್ರಾಮದ ಮಹಾಂತೇಶ ತಳವಾರ ಇವರಿಬ್ಬರು ಗೆಳಯರಾಗಿದ್ದು ಸುನೀಲ‌ ಮಹಾದೇವ ಸಾಳುಂಕೆ ಇತನು ಮಹಾಂತೇಶ ಹರಿಶ್ಚಂದ್ರ ತಳವಾರ ಹೆಂಡತಿ ಜೊತೆ ಅಸಭ್ಯ ವರ್ತನೆ ಮಾಡಿದ್ದೇ ಕೊಲೆಗೆ ಪ್ರಮುಖ ಕಾರಣ.

ಈ ವಿಷಯವಾಗಿ ಹಿಂದೆ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು. ಜಗಳದ ನಂತರ ಇಬ್ಬರು ಗೆಳೆಯರು ಮತ್ತೆ ಅನ್ಯೋನ್ಯವಾಗಿದ್ದರು. ಇಬ್ಬರು ಪರಸ್ಪರ ಇಬ್ಬರ ಮನೆಗೆ ಹೋಗಿ ಬರ್ತಾಯಿದ್ದರು.

ಅ.7 ರಂದು ಆರೋಪಿ ಮಹಾದೇವ ತಳವಾರ ಹಾಗೂ ಆತನ ಹೆಂಡತಿ ಸಹೋದರ ರಾಜು ಬೈಕ್ ಮೇಲೆ ಸ್ನೇಹಿತ ಮೃತ ವ್ಯಕ್ತಿ ಸುನೀಲನನ್ನು ಕರೆದುಕೊಂಡು ಹೋಗಿ ಮದ್ಯ ಕುಡಿಸಿ ಚಿಕ್ಕೋಡಿ ತಾಲೂಕಿನ ಕರೋಶಿ ಅರಣ್ಯ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಕುತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ.

ಸ್ನೇಹಿತ ಸುನೀಲನನ್ನ ಕೊಲೆ ಮಾಡಿದ ಆರೋಪಿಗಳು

ಪೊದೆಯಲ್ಲಿ ಮೃತದೇಹ ಹಾಗೂ ಒಂದು ಬೈಕ್ ಇಟ್ಟು ಪರಾರಿಯಾಗಿದ್ದು ಕೊಲೆಯಾದ ಸುನೀಲ‌ ಶವ ಸಿಕ್ಕ ನಾಲ್ಕೆ ಗಂಟೆಯಲ್ಲಿ ಚಿಕ್ಕೋಡಿ ಪೋಲಿಸರು ಅರೋಪಿಯನ್ನ ಬಂಧಿಸಿದ್ದಾರೆ.