ಉ.ಕ ಸುದ್ದಿಜಾಲ‌ ಚಿಕ್ಕೋಡಿ :

ಜಮೀನಿನಲ್ಲಿ ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಗಲಾಟೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ನೇಜ – ಶಮನೇವಾಡಿ ರಸ್ತೆ ಬಳಿ ಘಟನೆ.

ಶಮನೇವಾಡಿ ಗ್ರಾಮದ ನಿವಾಸಿ ಸುನೀಲ್ ಖೋತ್ (45) ಕೊಲೆಯಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಸುನೀಲ್ ಖೋತ್ ಸಾವು. ಹಲವು ವರ್ಷಗಳಿಂದ ರಸ್ತೆ ವಿಚಾರವಾಗಿ ಕಲಹ ಇತ್ತು. ಇಂದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಅಣ್ಣ- ತಮ್ಮಂದಿರು.

ಸಂಜೆ ರಾಜಿ ಪಂಚಾಯ್ತಿ ಮಾಡೋಣ ಎಂದು ಸಮಜಾಯಿಸಿ ಕಳುಹಿಸಿದ್ದ ಪೊಲೀಸರು. ಮತ್ತೆ ಗಲಾಟೆ‌ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯ. ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು.

ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ, ಪರಿಶೀಲನೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.