ಉ.ಕ ಸುದ್ದಿಜಾಲ ಜತ್ತ :

ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿರುವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಬಿಳ್ಳೂರ ಗ್ರಾಮದ ಹೊರವಲಯ ತೋಟದಲಿರುವ ಕೆರೆಯಲ್ಲಿ ತಾಯಿ ಮತ್ತು 3 ಮಕ್ಕಳ ಶವ ಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಮಹಿಳೆ, ಸುನಿತಾ ತುಕಾರಾಮ್ ಮಾಳಿ, ಪುತ್ರಿ ಅಮೃತಾ, ಅಂಕಿತಾ ಹಾಗೂ ಐಶ್ವರ್ಯಾ ಶವವಾಗಿ ಪತ್ತೆ, ಬಿಳ್ಳೂರು ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ತಾಯಿ ಮಕ್ಕಳು.

ಮೃತ ತಾಯಿ ಸುನೀತಾ ತುಕಾರಾಮ ಮಾಳಿ ತವರು ಮನೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮವಾಗಿದ್ದು, ಅಲ್ಲಿ ಹೋಗಿರಬಹುದೆಂದು ಪರಿಸಿಲಿಸಿದಾಗ ಅವರು ಇಲ್ಲಿ ಬಂದಿಲ್ಲವೆಂದು ತಿಳಿದು ಬಂತು ಅನಂತರ ಮೃತರ ಕುಟುಂಬದವರು ಶನಿವಾರ ರವಿವಾರ ಎಲ್ಲ ಕಡೆ ಹುಡುಕಿದರೂ ಸಹ ಸಿಗಲಿಲ್ಲ.

ಕಾಣೆಯಾದ ನಂತರ ಮೃತ ಸುನೀತಾ ಮಾಳಿ ಹಾಗೂ ಇವರ ಮಕ್ಕಳನ್ನ ಸುತ್ತಮುತ್ತ ಹುಡುಕಿದಾಗ ಮೃತ ದೇಹಗಳು ಕೆರೆಯಲ್ಲಿ ತೇಲುತ್ತಿದ್ದವು. ಮಾಹಿತಿ ಲಭ್ಯವಾದ ನಂತರ ಜತ್ತ ಪೋಲಿಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಪಂಚನಾಮ ಮಾಡಿ ಜತ್ತ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತರ ಪರೀಕ್ಷೆ ಮಾಡಿ ಮೃತದೇಹವನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಿದರು.

ಹಲವು ಅನುಮಾಗಳಿಗೆ ಎಡೆ ಮಾಡಿದ ತಾಯಿ ಮಕ್ಕಳ ಸಾವು, ಮಹಾರಾಷ್ಟ್ರದ ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.