ಉ.ಕ ಸುದ್ದಿಜಾಲ ಕಾಗವಾಡ :

ಅಪಘಾತವಾಗಿ ಕಾಲುವೆಗೆ ಬಿದ್ದ ಕಾರು ದಂಪತಿ ಸಾವು. ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ ನಿಯಂತ್ರಣ ತಪ್ಪಿದ ಪರಿಣಾಮ ನೀರು ತುಂಬಿದ ಕಾಲುವೆಗೆ ಬಿದ್ದ ಕಾರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ – ಐನಾಪೂರ ಮಧ್ಯದಲ್ಲಿ ಅಪಘಾತ ಕಾಲುವೆಗೆ ಬಿದ್ದ ಪರಿಣಾಮ ದಂಪತಿಗಳು ಸಾವು. ಮಂಗಸೂಳಿ – ಐನಾಪುರ ರಸ್ತೆಯಲ್ಲಿರುವ ಕೆರೆಯಲ್ಲಿ ಅಪಘಾತ ಸಂಭವಿಸಿದೆ.

ಕೊಲ್ಲಾಪುರ್ ಜಿಲ್ಲೆಯ ಕರವೀರ ತಾಲೂಕಿನ ಕೂಟೆರ ಗ್ರಾಮದ ಆದರ್ಶ ಯುವರಾಜ್ ಪಾಂಡವ್ (27), ಶಿವಾನಿ ಆದರ್ಶ್ ಪಾಂಡವ (20) ಮೃತಪಟ್ಟಿದ್ದಾರೆ. ಇನ್ನುಳಿದ ಐವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಫೋರ್ಡ್ ಕಾರಿನಲ್ಲಿ ಕಾಗವಾಡ ತಾಲೂಕಿನ ಐನಾಪುರದ ಸಂಬಂಧಿಕರ ‌ಮನೆ ಕಾರ್ಯಕ್ರಮಕ್ಕೆ ಬಂದಿದ್ದರು. ಮರಳಿ ಮನೆಗೆ ಹೋಗುವಾಗ ಮಂಗಸೂಳಿ – ಐನಾಪುರ ರಸ್ತೆ ತಿರುವಿನಲ್ಲಿ‌ ಕಾರು ನಿಯಂತ್ರಣ ಯಪ್ಪಿ ಕಾಲುವೆಗೆ ಬಿದ್ದಿದೆ.

ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ರೂಪಾಲಿ ಗಾಡೇಕರ್, ಕುನಾಲ್ ಗಾಡೇಕರ್, ರಾಜವೀರ ಪಾಂಡವ್, ಅನವಿ ಪಾಂಡವ್, ಪೂಜಾ ಬಾಮನೆ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ‌ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.