ಉ.ಕ ಸುದ್ದಿಜಾಲ ವಿಜಯಪುರ :
ನಿರ್ಮಾಣ ಹಂತದ ಕಟ್ಟಡದ ಕಂಪೌಂಡನಲ್ಲಿ ಹೆಣ್ಣು ಮಗು ಪತ್ತೆ. ಸುಮಾರು ಏಳೆಂಟು ತಿಂಗಳ ಹೆಣ್ಣು ಮಗು. ವಿಜಯಪುರ ನಗರದ ಆಶ್ರಮ ರಸ್ತೆ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆ.
ಬಟ್ಟೆಯಲ್ಲಿಟ್ಟು ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು.. ಇಂದು ಬೆಳಿಗ್ಗೆ ವಾಯು ವಿಹಾರಕ್ಕೆ ಜನರು ಬಂದಾಗ ಘಟನೆ ಬೆಳಕಿಗೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು.
ಮಗುವಿಗೆ ಹಾಲು ಕುಡಿಸಿ ಆರೈಕೆ ಮಾಡಿದ ಸ್ಥಳೀಯರು. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆಂಬುದು ಶಂಕೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಆದರ್ಶನಗರ ಪೊಲೀಸರು.
108 ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಹೆಣ್ಣು ಮಗು ರವಾನೆ. ಚಿಕಿತ್ಸೆ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಪರ್ಧಿಗೆ ಮಗು ಹಸ್ತಾಂತರ. ಹೆಣ್ಣು ಮಗುವನ್ನು ಬಿಟ್ಟು ಹೋದವರ ಪತ್ತೆಗೆ ಮುಂದಾದ ಆದರ್ಶನಗರ ಪೊಲೀಸರು.
ಶ್ರಾವಣ ಶುಕ್ರವಾರ ಮಗುವನ್ನು ಬಿಟ್ಟು ಹೋದ ತಾಯಿ ಹಾಗೂ ಪೋಷಕರ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಮದ್ದಾರೆ. ಈ ಕುರಿತು ವಿಜಯಪೂರ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.