ಚಿಕ್ಕೋಡಿ :

ಬಾಹುಬಲಿ‌ ಟೋಪಗಿ – ಬಾಳೆ ಹಣ್ಣು ಬೆಳೆದ ರೈತ

ಸಾಲ ಸೊಲ ಮಾಡಿ ಬೆಳೆದ ಬಾಳೆ ಹಣ್ಣು. ಬಾಳೆ ಹಣ್ಣಿಗೆ ಬೆಲೆ ಇಲ್ಲದೇ ಬೇಸತ್ತ ಗಡಿ ಭಾಗದ ರೈತರು, ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಹಾಗೂ ಬಾಳೆ ಹಣ್ಣಿಗೆ ಬೆಲೆ ಸಿಗದೆ ಗಡಿ ಭಾಗದ ರೈತರು ಕಂಗಾಲು.

ಹೌದು ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಬಾಳೆ ಹಣ್ಣು ಬೆಳೆದ ರೈತರು‌ ಅಕ್ಷರಶಃ ಬೀದಿಗೆ ಬಂದಂತಾಗಿದೆ ಸುಮಾರು‌ ಒಂದು ಎಕರೆಗೆ 80 ಸಾವಿರ ರೂಪಾಯಿ ಖರ್ಚು ಮಾಡಿ‌ ಬೆಳೆದ ಬಾಳೆ ಹಣ್ಣಿನ ಬೆಳೆಗೆ ಸರಿಯಾದ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದು ಬಾಳೆ ಬೆಳೆ ಮಾಡಲು ಮಾಡಿದ ಸಾಲ ತೆಲೆ ಮೇಲೆ ಹೆಚ್ಚುಗುತ್ತಲೆ ಹೊರಟಿದೆ. ಬಾಳೆ ಬೆಳೆದು ಯಶಸ್ಸು ಕಾಣಬೇಕಾದ ರೈತನಿಗೆ ಇಂದು ನಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ.

ಕಳೆದ ವರ್ಷ ಒಂದು ಎಕರೆ ಬಾಳೆ ಬೆಳೆದ ಯಶಸ್ಸು ಕಂಡಿದ್ದ ರೈತರಿಗೆ ಈ ವರ್ಷ ಬಾಳೆ ಬೆಳೆದು ಕೈ ಸುಟ್ಟಿಕೊಂಡಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿರುವ ರೈತರಿಗೆ ಸರಿಯಾದ ಮಾರುಕಟ್ಟೆಗಳಿಲ್ಲ ಬೆಳಗಾವಿ ಮಾರುಕಟ್ಟೆಗೆ ತೆರಳಬೇಕಾದರೆ ಸುಮಾರು 100 ಕಿ‌.ಮೀ ಗಿಂತ ಹೆಚ್ಚು ಪ್ರಯಾಣಿಸಬೇಕು ಪಕ್ಕದ ಮಹಾರಾಷ್ಟ್ರದ ಮಾರುಕಟ್ಟೆಗಳಿಗೆ ಹೋದರೆ ಕರ್ನಾಟಕ ಜನರನ್ನ ನೋಡಿದರೆ ಮಲತಾಯಿ ಧೋರಣೆ ತೋರುತ್ತಾರೆ ಹೀಗಾಗಿ ನಮ್ಮಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲ ಬಾಳೆ ಬೆಳೆದು ಅವುಗಳನ್ನು ಮಾರುಕಟ್ಟೆಗಳಿಗೆ ಕಳಿಹಿಸುವುದೇ ಒಂದು ಸವಾಲಾಗಿದೆ. ನಮ್ಮಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಿ ಎಂದು ಚಿಕ್ಕೋಡಿ ಉಪವಿಭಾಗದ ರೈತರ ಆಗ್ರಹವಾಗಿದೆ.

ರೈತರು ದೇಶದ ಬೆನ್ನೆಲಬು ಎಂದು ಹೇಳುವ ಸರ್ಕಾರ ಮಾತ್ರ ರೈತರ ಕಡೆ ಗಮನ ಹರಿಸುತ್ತಿಲ್ಲ ಕೇವಲ ಬಂಡವಾಳ ಷಾಯಿಗಳಿಗೆ ಹಣ ಹೂಡಿಕೆ ಮಾಡಲು‌ ಮುಂದಾಗುತ್ತಿದೆ. ಸಾಲ ಮಾಡಿ ಬೆಳೆದ ಬಾಳೆ ಹಣ್ಣಿನ ಬೆಳೆ ಕೈಗೆ ಸಿಕ್ಕರೂ ಮಾರುಕಟ್ಟೆಗಳಲ್ಲಿ ಬೆಲೆ ಇಲ್ಲ ಹಾಗೂ ಸ್ಥಳೀಯವಾಗಿ ಮಾರುಕಟ್ಟೆಗಳೆ ಇಲ್ಲ ಹೀಗಾಗಿ ನಮ್ಮಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಈ ಭಾಗದ ಜನರಿಗೆ ಅನಕೂಲವಾಗುತ್ತೆ. ಪ್ರತಿ ವರ್ಷ ನವ್ಹೆಂಬರ ಮೊದಲವಾರ ದೀಪಾವಳಿ ಹಬ್ಬದಲ್ಲಿ ಒಂದು ಟನ್ ಬಾಳೆ ಹಣ್ಣಿಗೆ 15 ಸಾವಿರದಿಂದ 20 ಸಾವಿರದ ವರೆಗೆ ಬೆಲೆ ಇರುತ್ತದೆ. ಆದರೆ, ಈ ಬಾರಿ ಕೇವಲ ನಾಲ್ಕು ಸಾವಿರದಿಂದ ಐದು ಸಾವಿರದ ವರಗೆ ಒಂದು ಟನ್ ಬಾಳೆ ಹಣ್ಣಿಗೆ ಬೆಲೆ ಸಿಗುತ್ತಿದ್ದು, ಇಷ್ಟು ಹಣಕ್ಕೆ ಬಾಳೆ ಹಣ್ಣನ್ನು ಟ್ರಾವೇಲ್ ಮಾಡಿದ ಖರ್ಚು ಸಹಿತ ಹೊಂಟ್ಟುವುದಿಲ್ಲ. ಹತ್ತು ಟನ್ ಬಾಳೆ ಹಣ್ಣನ್ನು ಬೆಳಗಾವಿ ಮಾರುಕಟ್ಟೆಗೆ ಸಾಗಿಸಬೇಕಾದರೆ ಎಂಟ ರಿಂದ ಹತ್ತು ಸಾವಿರ ಖರ್ಚಾಗುತ್ತದೆ ಹೀಗಾದರೆ ನಾವು ಬಾಳೆ ಹಣ್ಣಿನಲ್ಲಿ ಲಾಭ ಹೇಗೆ ಪಡೆಯಲು ಸಾಧ್ಯ ಎನ್ನುತ್ತಾರೆ ರೈತ ಅಪ್ಪಾಸಾಬ

ರೈತ ದೇಶದ ಬೆನ್ನಲಬು ಹೆಸರಿಗೆ ಮಾತ್ರವಾಗಿದ್ದು, ಬಾಳೆ ಹಣ್ಣು ಬೆಳೆದ ರೈತರು ನಷ್ಟ ಅನುಭವಿಸುವಂತ ಪ್ರಸಂಗ ಎದುರಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಸರಿಯಾಗಿ ಮಾರುಕಟ್ಟೆಗಳ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಭಾಗದ ರೈತರು ಕಷ್ಟ ಅನುಭವಿಸುವಂತ ಪ್ರಸಂಗ ಎದುರಾಗಿದೆ. ಈಗಲಾದರು ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾರುಕಟ್ಟೆ ಪ್ರಾರಂಭಿಸಿದರೆ ಸ್ಥಳೀಯ ರೈತರಿಗೆ ಅನಕೂಲವಾಗಲಿದೆ.