ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಲವು ಕಡೆ ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಕಬ್ಬು ಕಟಾವ್ ಮಾಡುತ್ತಿರುವ ರೈತರಿಗೆ ಹಾಗೂ ಟ್ಯಾಕ್ಟರ್ ಚಾಲಕರಿಗೆ ತುಂಬಾ ತೊಂದರೆ ಎದುರಾಗಿದೆ.

ಅಥಣಿ ತಾಲೂಕಿನ ಕೊಕಟನೂರ ಗ್ರಾಮ ಸಮೀಪದಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್ ಒಂದು ನೋಡುನೋಡುತ್ತಿದ್ದಂತೆ ಬಿದ್ದಿದ್ದು ಅದೃಷ್ಟವಶ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ರಾತ್ರಿ ಮಳೆಯಾದ ಪರಿಣಾಮ ಈ ಅವಘಡ ಸಂಭವಿಸಿದೆ. ಮೊದಲೇ ಗಡಿ ಭಾಗದ ರೈತರು ಕಷ್ಟ ಅನುಭವಿಸುವಂತ ಸಂಧರ್ಭದಲ್ಲಿ ಅಕಾಲಿಕ‌ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ‌ ಅತಿ ಹೆಚ್ವಾಗಿ ಕಬ್ಬು ಬೆಳೆಯುತ್ತಾರೆ. ಆದರೆ, ಈ ಭಾಗದಲ್ಲಿ ರಸ್ತೆಗಳು ಸರಿ ಇರದೇ ಇರುವುದರಿದ ಟ್ರ್ಯಾಕ್ಟರ ಚಾಲಕರು‌ ಕಂಗಾಲಾಗಿದ್ದು ದಿನಂಪ್ರತಿ ಟ್ರ್ಯಾಕ್ಟರ ಚಾಲಕರು ತೊಂದರೆ ಅನುಭವಿಸುವಂತ ಪ್ರಸಂಗ ಎದುರಾಗಿದೆ. ಈ ಭಾಗದ ಸ್ಥಳೀಯ ಜನಪ್ರತಿನಿಧಿಗಳು ಹಾಳಾದ ರಸ್ತೆಗಳನ್ನು ದುರಸ್ಥಿಗೊಳಿಸಬೇಕೆಂದು ಸ್ಥಳಿಯ ರೈತರು ಆಗ್ರಹಿಸಿದ್ದಾರೆ. ಹೋಗುವ ದಾರಿಯಲ್ಲಿ ಟ್ರ್ಯಾಕ್ಟರ ಟ್ರ್ಯಾಲಿಗಳು ಬೀಳುತ್ತಿರುವ ಪರಿಣಾಮ ವಾಹನ ಸವಾರರು ತೊಂದರೆ ಅನಿಭವಿಸುವಂತ ಪ್ರಸಂಗ ಎದುರಾಗಿದೆ.