ಉ.ಕ ಸುದ್ದಿಜಾಲ ಕಾಗವಾಡ :
ಇಸ್ಪಿಟ್ ಅಡ್ಡೆಯ ಮೇಲೆ ದಾಳಿ 15 ಆರೋಪಿಗಳ ಬಂಧನ ಒಬ್ಬ ಆರೋಪಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ.
ದಸರಾ ಹಬ್ಬ ಹಿನ್ನಲೆ ಇಸ್ಪೀಟ್ ಆಡುತ್ತಿರುವ ಅಡ್ಡೆ ವೇಳೆ ದಾಳಿ ನಡೆಸಲಾಗಿದ್ದು, ಕಾಗವಾಡ ಪಟ್ಟಣದ ಅಂಬೇಡ್ಕರ್ ಚೌಕ್ ಹತ್ತಿರ ವಿಜಯ್ ಭೀಮರಾವ್ ಕಾಂಬಳೆ ಇವರ ಮನೆಯಲ್ಲಿ ಆಡುವ ವೇಳೆ ದಾಳಿ ಮಾಡಿದ ಕಾಗವಾಡ ಪೋಲಿಸರು ಒಟ್ಟು 14,85,050 ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಂದರ್-ಬಾಹರ್ ಎಂಬುವ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾಗ 1,28,350 ಹಣ, 13,00,000 ಬೆಲೆ ಬಾಳುವ 2 ಕಾರ್ ಗಾಡಿ ಹಾಗೂ 56,700 ಬೆಲೆ ಬಾಳುವ ವಿವಿಧ ಕಂಪನಿಯ 14 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕಾಗವಾಡ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲು.