ಉ.ಕ ಸುದ್ದಿಜಾಲ ಹುಕ್ಕೇರಿ :

ಒಂದು ಬೈಕ್ ಹಾಗೂ ಮೂರು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಸರಣಿ ಅಪಘಾತದಲ್ಲಿ ತಾಯಿ ಹಾಗೂ ಮಗು ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದ ಬಳಿ‌ ನಡೆದಿದೆ.

ಬೈಕ್ ಮೇಲೆ ಸಂಚರಿಸುತ್ತಿದ್ದ ತಾಯಿ ಹಾಗೂ 6 ವರ್ಷದ ಮಗು ದುರ್ಮರಣ ಬೈಲಹೊಂಗಲ್ ತಾಲೂಕಿನ ಭಾರತಿ ಪೂಜೇರಿ (28), ವೇದಾಂತ ಪೂಜೇರಿವ(6) ಮೃತ ದುರ್ದೈವಿಗಳು. ಮೃತ ಭಾರತಿ ಪೂಜೇರಿ ಪತಿ ಅನಿಲ ಪೂಜೇರಿ ಗಂಭೀರ ಗಾಯ, ಗಾಯಾಳು ಅನಿಲ ಪೂಜೇರಿ ಚಿಕಿತ್ಸೆ ಸ್ಥಳಿಯ ಆಸ್ಪತ್ರೆಗೆ ರವಾಣೆ ಮಾಡಲಾಗಿದೆ.

ಅನೀಲ ಪೂಜೇರಿ, ಅವರ ಪತ್ನಿ ಭಾರತಿ ಮತ್ತು ಮಗ ವೇದಾಂತ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಗೋಕಾಕದಿಂದ ಹುಕ್ಕೇರಿ ಕಡೆಗೆ ತೆರಳುತ್ತಿದ್ದ ಒಂದು ಕಾರು, ಹುಕ್ಕೇರಿಯಿಂದ ಘಟಪ್ರಭಾ ಕಡೆಗೆ ತೆರಳುತ್ತಿದ್ದ ಎರಡು ಕಾರುಗಳು ಮತ್ತು ಅನೀಲ ಪೂಜೇರಿ ಅವರು ಚಲಾಯಿಸುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಮತ್ತು ಒಂದು ಇಂಡಿಕಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಬೈಕಿನಲ್ಲಿ ಅನೀಲ ಪೂಜೇರಿ ಅವರ ಹಿಂಬದಿಗೆ ಕುಳಿತು ಸವಾರಿ ಮಾಡುತ್ತಿದ್ದ ಭಾರತಿ ಮತ್ತು ವೇದಾಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಕ್ಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲು.