ಉ.ಕ ಸುದ್ದಿಜಾಲ ವಿಜಯಪುರ :

ಸಿದ್ದರಾಮಯ್ಯ ಮಾತಿಗೆ ಫೇಸ್ಬುಕ್ ನಲ್ಲಿ ಕಾಮೆಂಟ್ ಮಾಡಿದ್ದ ಪೇದೆ ಅಮಾನತ್ತು. ವಿಜಯಪುರ ಎಸ್ಪಿ ಹೆಚ್ ಡಿ ಆನಂದ ಕುಮಾರ ಅವರಿಂದ ಅಮಾನತು ಆದೇಶ.

ಕುರುಬರ ಸಂಘದಿಂದ ದೂರು ಹಿನ್ನೆಲೆ ಅಮಾನತು ಆದೇಶ ನೀಡಲಾಗಿತ್ತು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ರಾಜಶೇಖರ. ಪೊಲೀಸ್ ಪೇದೆ ರಾಜಶೇಖರ ಖಾನಾಪುರ ಕಾಮೆಂಟ್ ಮಾಡಿದ್ರು.

ಭಾರತ ಜೋಡೋ ಪಾದಯಾತ್ರೆಯಲ್ಲಿ ಪೊಲೀಸರ ಬಗ್ಗೆ ಮಾತಾಡಿದ್ದ ಸಿದ್ದರಾಮಯ್ಯ, ಪೊಲೀಸ್‌ನವರು ಏನಾದರೂ ಅವರ ಜತೆ ಶಾಮೀಲಾದ್ರೆ ಅನ್ನೋ ಸಿದ್ದರಾಮಯ್ಯ ಮಾತು. ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು ಎಂದು ಕಾಮೆಂಟ್ ಹಾಕಿದ್ದ ಪೊಲೀಸ್ ಪೇದೆ ರಾಜಶೇಖರ.

ವಾಟ್ಸಾಪ್ ಗ್ರೂಪ್ ಗಳಲ್ಲಿ ಪೊಲೀಸ್ ಪೇದೆ ಕಾಮೆಂಟ್ ಪೋಸ್ಟ್ ವೈರಲ್ ಆಗಿತ್ತು. ಸರ್ಕಾರಿ ಹುದ್ದೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕಾದ ಇವರು. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದ್ದ ಸಿದ್ದು ಅಭಿಮಾನಿಗಳು.