ಉ.ಕ ಸುದ್ದಿಜಾಲ ಚಿಕ್ಕೋಡಿ :

ಟ್ರಾಕ್ಟರ್ ಚಾಲಕರು ಅಗತ್ಯಕ್ಕಿಂತ ಹೆಚ್ಚಾಗಿ ಟೇಲರ್ಗಳನ್ನು ಲೋಡ್ ಮಾಡಿಕೊಂಡು ಸಿಟಿ ಪ್ರವೇಶ ಮಾಡಿತ್ತಿದ್ದು ಟ್ರಾಕ್ಟರ್ ಅತಿಯಾದ ಲೋಡ್ ತುಂಬಿದ ಟೇಲರ್ ಗಳನ್ನು ಎಳೆಯಲಾಗದೆ ಸರ್ಕಸ್ ಮಾಡ್ತಿರೋ ದೃಶ್ಯಗಳು ಕಾಮನ್ ಆಗಿಬಿಟ್ಟಿವೆ. ಜನರ ಜೀವಕ್ಕೆ ಸಂಚಕಾರ ತರುವ ಚಾಲಕರ ಹುಚ್ಚಾಟದ ವಿರುದ್ದ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಿದ್ದು ಓವರ್ ಲೋಡ್ ಮಾಡಿಕೊಂಡು ಬರುವ ಚಾಲಕರಿಗೆ ವಾರ್ನಿಂಗ್ ನೀಡಲಾಗಿದೆ.

ಚಿಕ್ಕೋಡಿ ಎಸಿ ಸಂತೋಷ ಕಾಮಗೌಡರ

ಓವರ್ ಲೋಡ್ ಹಾಕಿಕೊಂಡು ಸಿಟಿಯ ಒಳಗೆ ಅತಿಯಾಗಿ ಜನ ಓಡಾಡುವ ಸಮಯದಲ್ಲಿ ಟ್ರಾಕ್ಟರಗಳನ್ನು ತರಬಾರದು. ಮುಂಜಾನೆ 8 ಗಂಟೆಯಿಂದ 12 ಗಂಟೆಯವರಗೂ ಹಾಗೂ ಸಂಜೆ 5 ರಿಂದ ರಾತ್ರಿ 9 ರ ವರೆಗೂ ಸಹ ಓವರ್ ಲೋಡೆಡ್ ಟ್ರಾಕ್ಟರ ಗಳನ್ನು ಪಟ್ಟಣದ ಒಳಗೆ ತರಬಾರದು ಅಂತ ಮನವಿ ಮಾಡಿದ್ದಾರೆ. ಅಲ್ಲದೆ ನಿಯಮ ಮೀರಿ ಯಾರಾದ್ರೂ ನಡೆದುಕೊಂಡರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ದಂಡವಿಧಿಸುವ ಎಚ್ಚರಿಕೆ ನೀಡಿದ್ದಾರೆ.