ಉ.ಕ ಸುದ್ದಿಜಾಲ ಹುಕ್ಕೇರಿ :

ಯಮಕನಮರಡಿಯಲ್ಲಿ ಸತೀಶ್ ಜಾರಕಿಹೋಳಿ 57ಸಾವಿರ ಮತಗಳ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ 37 ಕಿ.ಮೀಟರ್ ವರೆಗೆ ದೀರ್ಘ ದಂಡ ನಮಸ್ಕಾರ ಹಾಕಿ ಹರಿಕೆ ತೀರಿಸಿದ ಅಭಿಮಾನಿ.

ಬೆಳಗಾವಿ ಜಿಲ್ಲೆಯ ಹುದಲಿ ರಾಮಾಪೂರ ಗ್ರಾಮದಿಂದ ಗೋಕಾಕ್ ಲಕ್ಷ್ಮೀದೇವಿ ದೇವಸ್ಥಾನದವರೆಗೆ ದಂಡನಮಸ್ಕಾರ ಹಾಕಿದ ಸತೀಶ ಜಾರಕಿಹೋಳಿ ಅಭಿಮಾನಿ ಮಾರುತಿ ಕೋಟಗಿ ಎನ್ನುವ ಸಾಹುಕಾರ ಅಭಿಮಾನಿಯಿಂದ ಹರಿಕೆ.

50 ಸಾವಿರಕ್ಕೂ ಮೇಲ್ಪಟ್ಟು ಲೀಡ್ ನಲ್ಲಿ ಸತೀಶ್ ಜಾರಕಿಹೋಳಿ ಗೆಲ್ಲಲಿ ಎಂದು ಹರಿಕೆ ಹೋತ್ತಿದ್ದ ಅಭಿಮಾನಿ‌ ಮಾರುತಿ. ಗೋಕಾಕ್‌ನ ಪ್ರಸಿದ್ಧ ಲಕ್ಷ್ಮೀ ದೇವಿಗೆ ಹರಿಕೆ ಹೊತ್ತಿದ್ದ ಮಾರುತಿ.