ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಘೋಷಣೆಯಾಗಲಿರುವ ಹಿನ್ನಲೆಯಲ್ಲಿ ಅಥಣಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಅವರಿಗೆ ಗೆಲುವಾಗಲಿ ಎಂದು ಅವರ ಅಭಿಮಾನಿ ಪ್ರಶಾಂತ ಪ್ರಕಾಶ ಮಾಳಿ ಅವರು ದೇವರ ಮೊರೆಹೋದ ಘಟನೆ ಜರುಗಿದೆ.

ಅಥಣಿ ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಅಭಿಮಾನಿ ಪ್ರಶಾಂತ ಮಾಳಿ ದೇವಸ್ಥಾನದ ಸುತ್ತ ದೀಡ್ ನಮಸ್ಕಾರ ಹಾಕಿ, ಕೈಯಲ್ಲಿ ಕರ್ಪೂರ ಹಿಡಿದು ಆರತಿ ಮಾಡಿ ದೇವರಿಗೆ ವಿಶೇಷ ಪೂಜೆ ಮಾಡಿ ಲಕ್ಷ್ಮಣ ಸವದಿ ಅವರಿಗೆ ಗೆಲುವಾಗಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ರವಿ ಬಡಕಂಬಿ, ಮಲ್ಲಿಕಾರ್ಜುನ‌ ಬುಟಾಳಿ, ಸಚಿನ‌ ಬುಟಾಳಿ, ರವಿ ಭಾಸಿಂಗಿ, ವಿಶಾಲ‌ ಶೆಡಶ್ಯಾಳೆ, ಅರುಣ ಚಮಕೇರಿ, ಶ್ರೀಧರ ಮಾಳಿ, ರಮೇಶ ಮಾಳಿ, ಸಚಿನ ಹಳ್ಳದಮಳ, ಸಚಿನ ಬಡಕಂಬಿ ಸೇರಿದಂತೆ ಇತರರಿದ್ದರು.