ಉ.ಕ ಸುದ್ದಿಜಾಲ ನಿಪ್ಪಾಣಿ :

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ರಾಜಕೀಯ ಭೀಷ್ಮ ಎಂದೇ ಖ್ಯಾತಿ ಪಡೆದಿರುವ NCP ಪಕ್ಷದ ಅಧ್ಯಕ್ಷ ಶರದ್ ಪವಾರ ಆಗಮಿಸಿ ತಮ್ಮ ಅಭ್ಯರ್ಥಿ ಉತ್ತಮ ಪಾಟೀಲ್ ಪರ ಮತಬೇಟೆ ನಡೆಸಿದರು.

ಸುಮಾರು 50 ಸಾವಿರಕ್ಕೂ ಅಧಿಕ ಜನರು ಶರದ ಪವಾರ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿ ಉತ್ತಮ ಪಾಟೀಲ್ ಗೆಲುವಿಗೆ ಪವಾರ್ ಅಭಯ ನುಡಿದಿದ್ದಾರೆ. ನಿಪ್ಪಾಣಿಯಲ್ಲಿ ಬದಲಾವಣೆಯನ್ನು ಜನರು ಬಯಸಿದ್ದಾರೆ. ನಮ್ಮ ಅಭ್ಯರ್ಥಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವರು.

ರಾಷ್ಟ್ರೀಯ ಪಕ್ಷಗಳನ್ನು ಸೆಡ್ಡು ಹೊಡೆದು ಈ ಚುನಾವಣೆ ‌ನಿಂತಿದ್ದೇವೆ. ನಿಪ್ಪಾಣಿಯಲ್ಲಿ NCP ಗೆಲುವು ನಿಶ್ಚಿತ ಎಂದು ಶರದ್ ಪವಾರ ಸಭೆಯನ್ನು ಉದೇಶಿಸಿ ಮಾತನಾಡಿದರು.

ಒಟ್ಟಾರೆಯಾಗಿ ಗಡಿ ಭಾಗದಲ್ಲಿ ಎನ್‌ಸಿಪಿ ಅಭ್ಯರ್ಥಿ ಬಿರುಸಿನ ಪ್ರಚಾರ ನಡೆಸಿದ್ದು ಇಂದು ಶರದ್ ಪವಾರ ಆಗಮನದಿಂದ‌ ನಿಪ್ಪಾಣಿ ರಾಜಕೀಯ ರಣರಂಗಕ್ಕೆ ಮತಷ್ಟು ಬಲ ಬಂದತಾಗಿದೆ.