ಉ.ಕ ಸುದ್ದಿಜಾಲ ನಿಪ್ಪಾಣಿ :

ಕಳೆದ ಎಪ್ರೀಲ್ ನಲ್ಲಿ ಬಂಗಾರ ವ್ಯಾಪಾರಿ ಹಿಂಬಾಲಿಸಿ ಸಿನಿಮೆಯ‌ ಶೈಲಿಯಲ್ಲಿ ಕಳ್ಳತನ ಮಾಡಿರುವ ಘಟನೆಗೆ ಸಂಭಂದಿಸಿದಂತೆ ನಾಲ್ಕು ಜನ ಆರೋಪಿಗಳನ್ನ ನಿಪ್ಪಾಣಿ ಪೋಲಿಸರು ಬಂಧಿಸಿದ್ದಾರೆ.

ಬಂಗಾರದ ವ್ಯಾಪಾರಿಯ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಖದೀಮರ ಬಂಧನ ಮಾಡಲಾಗಿದ್ದು, ಬಂಧಿತರಿಂದ 75 ಗ್ರಾಂ ಬಂಗಾರ, 2.5 ಕೆಜಿ ಬೆಳ್ಳಿ ವಶಕ್ಕೆ ಪಡೆದ ಪೊಲೀಸರು.

ನಿಪ್ಪಾಣಿ ತಾಲೂಕಿನ ಭೀವಶಿ ಗ್ರಾಮದ ಬಳಿ ನಡೆದಿದ್ದು ದೋಂಡಿರಾಮ್ ವಿಷ್ಣು ಕಾಂಬಳೆ ಎನ್ನುವವರಿಂದ ಬೆಳ್ಳಿ ಬಂಗಾರ ಕದ್ದಿದ್ದ ಖದೀಮರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ನಿಪ್ಪಾಣಿ ಪೊಲೀಸರರಿಂದ ನಾಲ್ವರ ಬಂಧನ.

ಪ್ರದೀಪ ಕಾಂಬಳೆ (25) ಅವದೂತ ಕೋಳಿ, (25) ಅಕ್ಷಯ್ ಕೊಂಡಗೇರಿ (29) ಪಂಕಜ್ ಕೋಳಿ (23) ಬಂಧಿತರು, ಬಂಧಿತರಿಂದ 75 ಗ್ರಾಂ ಬಂಗಾರ, 2.5 ಕೆಜಿ ಬೆಳ್ಳಿ ವಶಕ್ಕೆ ಪಡೆದ ಪೊಲೀಸರು.

ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದ ಪೊಲೀಸರು. ನಿಪ್ಪಾಣಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.