ಉ.ಕ‌ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ತಾಲೂಕಿನ ಸುಳೇಭಾವಿಯಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅರೋಪಿಗಳನ್ನ ಬಂಧಿಸಲಾಗಿದೆ ಎಂದು ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ನೀಡಿದ್ದಾರೆ.

ಪ್ರಕರಣ ಸಂಬಂಧ ಆರು ಆರೋಪಿಗಳ ಬಂಧಿಸಲಾಗಿದೆ. ಸುಳೇಭಾವಿಯ ಶಶಿಕಾಂತ ಭೀಮಪ್ಪ ಮಿಸಾಳೆ (24) ಅಲಿಯಾಸ್ ಸಸ್ಸಾ, ಯಲ್ಲೇಶ್ ಹುಂಕ್ರಿ ಪಾಟೀಲ್ (22), ಮಂಜುನಾಥ ಶಿವಾಜಿ ಪರೋಜಿ (22), ದೇವಪ್ಪ ರವಿ ಕುಕಡೊಳ್ಳಿ(26), ಖನಗಾಂವ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ‌ ಹಣಬರಟ್ಟಿ (20), ಭರಮಣ್ಣ ನಾಗಪ್ಪ ನಾಯಕ (20) ಬಂಧಿತ ಆರೋಪಿಗಳು.

ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಹತ್ಯೆಯಾಗಿತ್ತು. ಎರಡು ಗ್ಯಾಂಗ್‌ಗಳ ಮಧ್ಯೆ ವೈಷಮ್ಯ‌ ಉಂಟಾಗಿ ಕೊಲೆ ಮಾಡಲಾಗಿತ್ತು. ನಿನ್ನೆ ಆರು ಜನರನ್ನು ವಶಕ್ಕೆ ಪಡೆಯಲಾಗಿತ್ತು.‌ ಈ ಆರು ಜನರೆ ಹತ್ಯೆ ಮಾಡಿದ್ದು ಗೊತ್ತಾಗಿ ಬಂಧನ ಮಾಡಿದ್ದೇವೆ. ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಬಂಧಿತರ ಪೈಕಿ ನಾಲ್ವರು ಸುಳೇಭಾವಿ ಗ್ರಾಮದವರು, ಇಬ್ಬರು ಖನಗಾಂವ ಗ್ರಾಮದವರು. ಒಂದೇ ಗ್ಯಾಂಗ್‌ನಲ್ಲಿದ್ದ ಇವರೆಲ್ಲರ ಮಧ್ಯೆ ಐದು ತಿಂಗಳ ಹಿಂದೆ ವೈಷಮ್ಯ ಬೆಳೆದಿತ್ತು. ಮಹೇಶ್ ಮುರಾರಿ ಗ್ಯಾಂಗ್ ನಮಗೆ ಬೆದರಿಕೆ ಹಾಕ್ತಿತ್ತು ಅಂತಾ ಹೇಳುತ್ತಿದ್ದಾರೆ. ನಮಗೆ ಏನಾದರೂ ಮಾಡ್ತಾರೆ ಅಂತಾ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ.