ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ಪಂಚಮಸಾಲಿ ಮುಖಂಡ ಧರೆಪ್ಪ ಠಕ್ಕನ್ನವರ ನಿನ್ನೆ ಅಷ್ಟೇ ಮಾಜಿ ಸಿಎಂ ಯಡಿಯೂರಪ್ಪ, ಬಸನಗೌಡ ಯತ್ನಾಳ, ರಮೇಶ ಜಾರಕಿಹೋಳಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ‌ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ‌ ಸೇರ್ಪಡೆ ಬಗ್ಗೆ ಅವರ ಮನದಾಳದ ಮಾತು ಹೀಗಿವೆ….

ರಾಜಕೀಯದಲ್ಲಿ ಸೋಲು-ಗೆಲವು ಸರ್ವೇ ಸಾಮಾನ್ಯ. ಆದರೆ ಸುಮಾರು 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬೆಲೆಕೊಟ್ಟು ನನ್ನ ಇಡೀ ಜೀವನವನ್ನೇ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಅಭ್ಯರ್ಥಿಗಳ ಗೆಲಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೆ ಇತ್ತೀಚೆಗೆ ಕೆಲವು ನಾಯಕರು ನೀನು ಅಥಣಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ

ನಿನ್ನ ತಯಾರಿ ಮಾಡಿಕೊಳ್ಳು ಎಂದು ಹೇಳುತ್ತಾ ನನ್ನಿಂದ ಪಕ್ಷದ ನೂರಾರು ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ಮಾಡಿಸಿದರು. ಪಕ್ಷದ ಮೇಲೆ ನಂಬಿಕೆ ಇಟ್ಟು ಅದರ ಪ್ರತಿಯೊಂದು ಖರ್ಚು-ವೆಚ್ಚವನ್ನು ಸ್ವತಃ ಮಾಡಿದೆ. ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದವರು ಪ್ರತಿಯೊಬ್ಬರು ಒಂದಿಲ್ಲ ಒಂದು ರೀತಿ ದುಡಿದಿದ್ದರು.

ಆದರೆ ಟಿಕೆಟ್ ಹಂಚಿಕೆಯ ವಿಷಯದಲ್ಲಿ ನಾವು ಹಗಲಿರುಳು ಪಕ್ಷಕ್ಕಾಗಿ ದುಡಿದವರಿಗೆ ಸೌಜನ್ಯಕ್ಕಾದರೂ ಕರೆದು ತಮ್ಮ ಬದಲಾವಣೆಯ ನಿರ್ಧಾರದ ಕುರಿತು ಚರ್ಚಿಸಬೇಕಾಗಿತು. ಪಕ್ಷದ ಸಂಘಟನೆ,‌ ಕಾರ್ಯಕ್ರಮ, ಪ್ರಚಾರಕ್ಕಾಗಿ ಹಗಲಿರುಳು ಶ್ರಮಿಸಿದವರನ್ನು ಕ್ಷೇತ್ರದಲ್ಲಿ ನಿರ್ಲಕ್ಷಿಸಿ ವ್ಯಯಕ್ತಿಕ ಸ್ವಾರ್ಥ ಸಾಧನೆಗಾಗಿ ಬಿಜೆಪಿ ಅಲ್ಲಿ ಟಿಕೆಟ್ ವಂಚಿತ ಸವದಿ ಅವರಿಗೆ ಕರೆದು ಟಿಕೆಟ್ ನೀಡಿದ್ದು ನಮ್ಮ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ.

ಬಿಜೆಪಿ ಪಕ್ಷದಲ್ಲಿ ಮಂತ್ರಿಯಾಗಿ, ಶಾಸಕನಿಲ್ಲದೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ಟಿಕೆಟ್ ನೀಡಿಲವೆಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ ತಕ್ಷಣ ಟಿಕೆಟ್ ನೀಡಿ ಬರಮಾಡಿಕೊಂಡಿರುವುದು ನನ್ನಂತಹ ಪಕ್ಷ ನಿಷ್ಠರಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಬಹಳಷ್ಟು ಅವಮಾನ ಮಾಡಿದಂತಾಗಿದೆ.

ಇದರಿಂದ ಕಳೆದು 5-6 ದಿನಗಳಿಂದ ನನ್ನ ಸ್ನೇಹಿತರು, ಕಾರ್ಯಕರ್ತರು, ಅಭಿಮಾನಿಗಳು, ಹಿರಿಯರು ಬಿಜೆಪಿ ಪಕ್ಷ ಸೇರೋಣ ಎಂಬ ನಿರ್ಧಾರ ಕೈಗೊಂಡಿದ್ದರಿಂದ ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ್ದೇನೆ. ಬಿಜೆಪಿ ಪಕ್ಷದ ಹಿರಿಯರು ನನ್ನ ಮೇಲೆ ಬಹಳಷ್ಟು ಭರವಸೆ ಹೊಂದಿದ್ದಾರೆ ಅವರ ಭರವಸೆ ಹುಸಿಯಾಗದಂತೆ ಪ್ರಾಮಾಣಿಕವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮವಹಿಸುತ್ತೇನೆ.

ಶ್ರೀ ಧರೇಪ್ಪ ಎಸ್ ಠಕ್ಕಣ್ಣವರ
ಅಥಣಿ ಮತಕ್ಷೇತ್ರ