ಉ.ಕ ಸುದ್ದಿಜಾಲ ಅಥಣಿ :

ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಅಥಣಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರ ಗೃಹಮಂತ್ರಿ ಭರ್ಜರಿ ಪ್ರಚಾರ ಮಾಡಿ ಲಕ್ಷ್ಮಣ ಸವದಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜ್ಯದ ಚುನಾವಣೆ ಬೇರೆ ಅಥಣಿ ಚುನಾವಣೆ ಬೇರೆ ಎಂದು ಮತದಾರರನ್ನ ಉದ್ದೇಶಿಷಿ ಮಾತನಾಡಿದರು.

ಅಥಣಿಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಿಸಲು ಮತ ಹಾಕಿ ಲಕ್ಷ್ಮಣ ಸವದಿಯನ್ನ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಹೇಶ್ ಕುಮಟಳ್ಳಿ. ಆದ್ರೂ ಸಹ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದೇವು. ಸೋತಾಗ ನಾನೇ ಸವದಿ ಜತೆಗೆ ಮಾತಾಡಿದೆ ಅವರೇ ಎಂಎಲ್‌ಸಿ ಮಾಡಿ ಅಂತಾ ಹೇಳಿದ್ರೂ.

ನಾವು ಎಂಎಲ್‌ಸಿ ಮಾಡಿದ್ವಿ, ಮಂತ್ರಿ ಮಾಡಿದ್ವಿ. ಎಂಎಲ್‌ಸಿ ಅವಧಿ ಇದ್ರೂ ಯಾಕೆ ಪಕ್ಷ ಬಿಟ್ರೀ ಅಂತಾ ನೀವು ಪ್ರಶ್ನೆ ಮಾಡಬೇಕು. ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡ್ರೀ ಭಜರಂಗಬಲಿ ಅವಮಾನ ಮಾಡುವ ಪಕ್ಷ ಸೇರಿಕೊಂಡ್ರಿ ಎಂದು ಲಕ್ಷ್ಮಣ ಸವದಿ ವಿರುದ್ದ ವಾಗ್ದಾಳಿ ನಡೆಸಿದ ಅಮೀತ ಷಾ

Amith Sha Speech