ಉ.ಕ ಸುದ್ದಿಜಾಲ ಬೆಳಗಾವಿ :

ಗಾಳಿಪಟ ಹಾರಿಸುವ ಮಾಂಜಾ ದಾರ ಕತ್ತಿಗೆ ಸಿಲುಕಿ 5 ವರ್ಷದ ಬಾಲಕ ಸಾವು. ತಂದೆ ಮಗ ಬೈಕ್ ಮೇಲೆ ಹೊರಟಿದ್ದಾಗ ನಡೆದ ಘಟನೆ.‌ ಬೆಳಗಾವಿಯ ಗಾಂಧಿನಗರ ಸಮೀಪದ NH-4 ರಸ್ತೆಯಲ್ಲಿ ಘಟನೆ ನಡೆದಿದೆ.

ಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ (5) ಮೃತ ಬಾಲಕ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಸಮೀಪದ ಅನಂತಪುರ ಗ್ರಾಮ. ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಲು ಬೆಳಗಾವಿ ನಗರಕ್ಕೆ ಬಂದಿದ್ದ ತಂದೆ ಮಗ.

ಬಟ್ಟೆ ಖರೀದಿಸಿ ಬೈಕ್ ಮೇಲೆ ಮರಳಿ ತಮ್ಮೂರಿಗೆ ಹೊರಟಿದ್ದ ತಂದೆ ಮಗ. ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕುಳಿತುಕೊಂಡಿದ್ದ ವರ್ಧನ. ಕಣ್ಣಿಗೆ ಕಾಣಿಸದ ಮಾಂಜಾ ದಾರ ನೇರವಾಗಿ ವರ್ಧನ ಕುತ್ತಿಗೆಗೆ ಬಿಗಿದಿದೆ.

ಗಟ್ಟಿಯಾಗಿ ಬಿಗಿದ ದಾರದಿಂದ ಸ್ಥಳದಲ್ಲೇ ಹಾರಿ ಹೋದ ಮಗುವಿನ ಪ್ರಾಣಪಕ್ಷಿ. ಮಗುವನ್ನು ಬದುಕಿಸಲು ತಂದೆ ಈರಣ್ಣನ ಪ್ರಯತ್ನವೆಲ್ಲಾ ವಿಫಲ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಾಂಜಾ ದಾರ ನಿಷೇಧವಿದ್ರು ಕಾಳಸಂತೆಯಲ್ಲಿ ಮಾರಾಟ. ಮಾಂಜಾ ದಾರ ಸಂಪೂರ್ಣ ನಿಷೇಧಿಸಲು ಬಾಲಕರ ಸಂಬಂಧಿ ಆಗ್ರಹ.