ಉ.ಕ ಸುದ್ದಿಜಾಲ ವಿಜಯಪುರ :

ವಿಜಯಪುರದಲ್ಲಿ ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ. ಆಟ ಆಡಲು ತೆರಳಿದ ಮೂವರು ಮಕ್ಕಳು ನಾಪತ್ತೆಯಾಗಿದ್ರು. ಇಂದು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆ.

ವಿಜಯಪುರ ನಗರದ ಶಾಂತಿ ನಿಕೇತನ ಶಾಲೆಯ ಬಳಿಯಿರುವ ನೀರು ಶುದ್ಧೀಕರಣ ಘಟಕ. ಮಹಾನಗರ ಪಾಲಿಕೆಯ ನೀರು ಶುದ್ಧೀಕರಣ ಅನುಷ್ಕಾ (10) ,ವಿಜಯ್ (8) ಮಿಹರ್(7) ಶವವಾಗಿ ಪತ್ತೆಯಾಗಿದ್ದಾರೆ.

ಮನೆ ಮುಂದೆ ಒಂಟಿ ಮೇಲೆ ಹತ್ತಿದ್ದ ಮೂವರು ಮಕ್ಕಳು. ಗಚ್ಚಿನಗಟ್ಟಿ ಕಾಲೋನಿಯಲ್ಲಿ ಒಂಟಿ ಮೇಲೆ ಹತ್ತಿ ಆಟವಾಡಿದ್ದ ಮೂವರು ಮಕ್ಕಳು. ನಿನ್ನೆ ಬೆಳಿಗ್ಗೆ 10ಗಂಟೆಗೆ ನಾಪತ್ತೆಯಾಗಿದ್ದ ಮಕ್ಕಳು…

ಗದಗನಿಂದ ಅನುಷ್ಕಾ ,ವಿಜಯ್ ಸಂಬಂಧಿಕರ ಮನೆಗೆ ಶಾಲಾ ರಜೆಗೆಂದು ಬಂದಿದ್ರು. ವಿಜಯಪುರದ ಮಿಹರ್ ಜೊತೆಗೆ ಆಟವಾಡಿದ್ದ ಮಕ್ಕಳು. ಮಕ್ಕಳ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು…

ನಿನ್ನೆಯಿಂದಲೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದ ಪೋಷಕರು. ವಿಜಯಪುರದ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ನೀರು ಶುದ್ಧೀಕರಣ ಘಟಕದ ಮುಖ್ಯ ಗೇಟ್ ಗೆ ಸೆಕ್ಯೂರಿಟಿ ಗಾರ್ಡ್ ಇರದಿದ್ದಕ್ಕೆ ಸಂಬಂಧಿಕರು ಆಕ್ರೋಶ ‌ವ್ಯಕ್ತಡಿಸಿದ್ದಾರೆ.

ನೀರು ಶುದ್ಧೀಕರಣ ಘಟಕದಲ್ಲಿದ್ದ ಮೂವರ ಶವ ಹೊರಕ್ಕೆ ತೆಗೆದ ಪೊಲೀಸರು.